29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯ ವಾರ್ಷಿಕೋತ್ಸವ

ಕನ್ಯಾಡಿ :   ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ ಕನ್ಯಾಡಿ1 ಇದರ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಆಹ್ವಾನಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಭಜನಾ ಕಾರ್ಯಕ್ರಮ, ಗಣಹೋಮ , ಸಾಮೂಹಿಕ ಶ್ರೀ  ಸತ್ಯಾನಾರಾಯಣ ಪೂಜೆ  ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಮಾ. 30  ರಂದು ನಡೆಯಿತು.

 ಸಂಜೆ  ಸಾಮೂಹಿಕ  ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಭಜನಾ ಕಾರ್ಯಕ್ರಮವನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ  ಶರತ್ ಕೃಷ್ಣ ಪಡುವೆಟ್ನಾಯರು ಉದ್ಘಾಟಿಸಿ ಮಾತನಾಡುತ್ತಾ ಪ್ರಸ್ತುತ ನಮ್ಮ ದೇಶ , ನಮ್ಮ ಜಿಲ್ಲೆ ,ತಾಲೂಕಿನಲ್ಲಿ  ಜನರಲ್ಲಿ ಧಾರ್ಮಿಕ ಜಾಗೃತಿ  ಮೂಡುತ್ತಿದೆ. ಭಜನೆಯ ಮೂಲಕ ಗ್ರಾಮದ ಮಕ್ಕಳು ಹಾಗೂ ಸಾರ್ವಜನಿಕರ  ಸಂಘಟನೆ ಮಾಡಲು ಸಾಧ್ಯವಿದೆ. ಭಜನಾ ಮಂಡಳಿ  ಇಂತಹ  ಉತ್ತಮ ಧಾರ್ಮಿಕ ಕಾರ್ಯಕ್ರಮ ನಡೆಸಿ ಸಂಘಟನೆ ಬಲಪಡಿಸಲು ದೇವರ ಆಶೀರ್ವದವಿರಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮಾರಂಭದ  ಅಧ್ಯಕ್ಷತೆಯನ್ನು  ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಅಶೋಕ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಉಜಿರೆಯ ಲಕ್ಷ್ಮಿ ಗ್ರೂಪ್ಸ್ ಮಾಲಕ  ಮೋಹನ್ ಕುಮಾರ್ ,  ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ,, ಶ್ರೀ ಕ್ಷೇ.ಧ.ಗ್ರಾ.ಯೋ ಕನ್ಯಾಡಿ ಒಕ್ಕೂಟದ ಅಧ್ಯಕ್ಷ ಮೋಹನ ಗೌಡ ಮೊದಲಾದವರು  ಉಪಸ್ಥಿತರಿದ್ದರು.

ಸೋನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಪವನ್ ಶೆಟ್ಟಿ ಸ್ವಾಗತಿಸಿ. ಸ್ಥಾಪಕ ಕಾರ್ಯದರ್ಶಿ ತನಿಯಪ್ಪ ಗೌಡ ಧನ್ಯವಾದವಿತ್ತರು.  ಬಳಿಕ ” ವಿಠ್ಠಲ್ ನಾಯಕ್ ಕಲ್ಲಡ್ಕ ಬಳಗದವರಿಂದ “ಗೀತಾ ಸಾಹಿತ್ಯ ಸಂಭ್ರಮ” ಕಾರ್ಯಕ್ರಮ ನಡೆಯಿತು.

Related posts

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ಅಲ್ಯುಮಿನಿಯಂ ದೋಂಟಿಗೆ ವಿದ್ಯುತ್ ಸ್ಪರ್ಷ: ಸಿಹಿಯಾಳ ತೆಗೆಯುತ್ತಿದ್ದ ಕೃಷಿಕ ಸಾವು

Suddi Udaya

ಶಿಶಿಲ: ಸೃಷ್ಟಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya

ಮಾ.14-19 ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya

ನಡ: ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya
error: Content is protected !!