24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

ನಾವರ:ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಮಾ.31 ರಂದು ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರವಿರಾಜ ಹೆಗ್ಡೆ ನೇರವೇರಿಸಿ ಮಾತನಾಡಿ ಈ ಭಾಗದ ಎಲ್ಲರ ಸಹಕಾರದಿಂದ ಈ ದೇವಸ್ಥಾನ ಅಭಿವೃದ್ಧಿ ಹೊಂದಿದೆ.ಯುವಕರು ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಎನ್.ನಿತ್ಯಾನಂದ ನಾವರ ವಹಿಸಿ ಕ್ಷೇತ್ರದಲ್ಲಿ ನೆಲೆನಿಂತ ಶ್ರೀ ಮಹಾಲಿಂಗೇಶ್ವರನ‌ ಶಕ್ತಿಯಿಂದ ಇಂದು ಊರಲ್ಲಿ ಸುಭೀಕ್ಷೆ ನೆಲೆಸಿದೆ. ಊರ ಸರ್ವ ಬಂಧುಗಳ ಸಹಕಾರದೊಂದಿಗೆ ಕ್ಷೇತ್ರ ಅಭಿವೃದ್ಧಿ ಹೊಂದಿದೆ ಎಂದರು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಸುಲ್ಕೇರಿ‌ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್,ಎಸ್‌.ಕೆ.ಡಿ.ಆರ್.ಡಿ.ಪಿ ಅಳದಂಗಡಿ ವಲಯ ಮೇಲ್ವಿಚಾರಕಿ ಸುಮಂಗಲಾ,ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅದ್ಯಕ್ಷ ಸುಧೀಶ್ ಹೆಗ್ಡೆ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಹೊರೆಕಾಣಿಕೆ ಸಮಿತಿ ಸಂಚಾಲಕಿ ಪುಷ್ಪಾವತಿ ಎನ್ ನಾವರ,ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಕೊರಲ್ಲ ಉಪಸ್ಥಿತರಿದ್ದರು.

ಧನ್ವಿತಾ, ಧನುಶ್ರೀ, ಪ್ರಣೀತಾ ಪ್ರಾರ್ಥನೆ ಹಾಡಿದರು‌.ಸಾಂಸ್ಕೃತಿಕ ಸಮಿತಿ ಸಂಚಾಲಕ ವೀರೇಂದ್ರ ಕುಮಾರ್ ಜೈನ್ ಸ್ವಾಗತಿಸಿದರು.ಕಾರ್ಯದರ್ಶಿ ವಿಜಯ್ ಕುಮಾರ್ ಜೈನ್ ನಿರೂಪಿಸಿದರು.

Related posts

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಮೀಯಾರು ಕೆಮ್ಮಟ್ಟೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

Suddi Udaya

ಬೆಳ್ತಂಗಡಿ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದ ಉದ್ಘಾಟನೆ

Suddi Udaya

ಮಚ್ಚಿನ :ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ರೂ.4 ಕೋಟಿ ಅನುದಾನ ಮಂಜೂರು

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ

Suddi Udaya

ಸರಕಾರಿ ಶಾಲೆಗಳನ್ನು ಮಾದರಿಯಾಗಿಸಲು ಬದುಕು ಕಟ್ಟೋಣ ಬನ್ನಿ ತಂಡ ಪಣ

Suddi Udaya
error: Content is protected !!