ಉಜಿರೆ: ಉಜಿರೆ ಗ್ರಾಮದ ಮಾಚಾರು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಎ 1 ರಂದು ಶ್ರೀ ದೇವರ ಸನ್ನಿಧಿಯಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಕೃಷ್ಣ ಬೊಲ್ಮಿಣ್ಣಾಯ , ಗಿರಿರಾಜ ಬಾರಿತ್ತಾಯ,ಪ್ರಕಾಶ್ ಬಾರಿತ್ತಾಯ, ಶಶಿಧರ ,ಶ್ರೀ ಲಕ್ಷ್ಮಿ ಜನಾರ್ದನ ಭಜನಾ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಎ 15 ರಂದು ಮಾಚಾರು ಶ್ರೀ ಲಕ್ಷ್ಮೀಜನಾರ್ದನ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೊಯ್ಯುರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ ದೇವತಾ ಪ್ರಾರ್ಥನೆ,ತೋರಣ ಪ್ರತಿಷ್ಠೆ,ಉಗ್ರಾಣ ಮುಹೂರ್ತ,ಗಣಪತಿ ಹೋಮ, ಪಂಚವಿಂಶತಿ ಕಲಶಾರಾಧನೆ ,ಪ್ರಧಾನ ಹೋಮ, ಕಲಶಾಭಿಷೇಕ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಉಜಿರೆಯ ಶ್ರೀ ಜ ನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿ ಹಾಗು ಮಾಚಾರು ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ ರಂಗಪೂಜೆ,ದೇವರ ಉತ್ಸವ, ರಕ್ತೇಶ್ವರಿ ಧರ್ಮದೈವ ನೇಮೋತ್ಸವ ನಡೆಯಲಿದೆ. ಎ 16 ರಂದು ಬೆಳಿಗ್ಗೆ ಸಂಪ್ರೋಕ್ಷಣೆ , ಪವಮಾನ ಅಭಿಷೇಕ ಮತ್ತು ಮಹಾಪೂಜೆ ರಾತ್ರಿ ರಂಗಪೂಜೆ ಮತ್ತು ಮಂತ್ರಾಕ್ಷತೆ ನಡೆಯಲಿದೆ . ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.