25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ

ಕಡಿರುದ್ಯಾವರ: ಕಾನರ್ಪ ಪುರುಷರ ಬಳಗದ ವತಿಯಿಂದ ಪುರುಷರ ರಾಶಿ ಪೂಜೆ ಕಾರ್ಯಕ್ರಮವು ಕಾನರ್ಪ ಓಬಯ್ಯಗೌಡರ ಮನೆಯಂಗಳದಲ್ಲಿ ನಡೆಯಿತು.


ತುಳುನಾಡ ಜನಪದ ಕಲೆಯಲ್ಲಿ ಒಂದಾದ ಈ ಪುರುಷರ ಕುಣಿತವು ಈ ಪರಿಸರದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳಿಂದಲೂ ನಡೆಯುತ್ತಾ ಬರುತ್ತಿದೆ. ಸುಗ್ಗಿ ತಿಂಗಳ ಐದಾರು ದಿನಗಳಲ್ಲಿ ನಡೆಯುವ ಈ ಕುಣಿತವು ತನ್ನ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ದಿಮಿಸೋಲೆ ಹೇಳುತ್ತಾ ಭೇಟಿ ನೀಡಿ ಪುರುಷರ ಬಳಗವು ವಿವಿಧ ವೇಷಗಳನ್ನು ತೊಟ್ಟು ಮನೆಯ ಮುಂದೆ ತನ್ನ ಹಾಸ್ಯ ತುಣುಕುಗಳ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಾರೆ.


ಪ್ರತಿ ವರ್ಷದಂತೆ ಈ ವರ್ಷವು ಸುಗ್ಗಿ ತಿಂಗಳಲ್ಲಿ ಒಂದು ದಿನ ವಿವಿಧ ವೇಷ ಧರಿಸಿ ಕಾನರ್ಪ ಪರಿಸರದ ಮನೆ ಮನೆಗೆ ಭೇಟಿ ನೀಡಿ ಪುರುಷರ ಕುಣಿತ ಪ್ರದರ್ಶನ ನೀಡಲಾಯಿತು ಹಾಗೂ ಪುರುಷರ ಬಳಗದ ಸಮಿತಿ ನಿರ್ಣಯಿಸಿದಂತೆ ಕಾನರ್ಪ ಓಬಯ್ಯ ಗೌಡರ ಮನೆಯಂಗಳದಲ್ಲಿ ಪುರುಷರ ರಾಶಿ ಪೂಜೆ ನೆರವೇರಿಸಲಾಯಿತು.
ಈ ರಾಶಿ ಪೂಜಾ ಕಾರ್ಯಕ್ರಮದಲ್ಲಿ ಊರ-ಪರವೂರ ನೂರಾರು ಭಕ್ತರು ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಲೋಕಯ್ಯ ಗೌಡ ಜಾರಿಗೆದಡಿ, ಸಂಜೀವ ಗೌಡ ಕೋಡಿಯೆಲ್, ಜನಾರ್ಧನ ಕಾನರ್ಪ, ರಾಘವೇಂದ್ರ ಭಟ್ ಕೋಡಿ, ಕಡಿರುದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಓಬಯ್ಯಗೌಡ, ಸುರೇಶ್ ಮಾಲ್ನ, ರಾಜೇಶ್ ಕೋಡಿ, ಆನಂದ ಮುಳಿಹಿತ್ಲು, ಚೆನ್ನ ಕೇಶವ, ಗುರುಪ್ರಸಾದ್ ಕಾನರ್ಪ, ಸುದರ್ಶನ ಕನಪ್ಪಾಡಿ, ಜಾರಪ್ಪ ಗೌಡ ಬೊಟ್ಟು, ಸುದರ್ಶನ ಶೀರಬೆಟ್ಟು, ರವೀಂದ್ರ ಪೂಜಾರಿ, ನೀಲಯ್ಯ ಗೌಡ ಮಾಲ್ನ, ಜಗದೀಶ ಉಂಗಿಲಪಾದೆ, ಉಮೇಶ್ ಕೋಡಿ, ಕಮಲಾಕ್ಷ ಕೋಡಿ, ಎಲ್ಯಣ್ಣ ಗೌಡ ಪೆಲತ್ತಡಿ, ರಾಮಚಂದ್ರ ಪಣಿಕ್ಕಲ್, ಸುರೇಶ್ ಹಿಮರಡ್ಡ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಹರೀಶ್ ಮೂಲ್ಯ ರವರಿಗೆ ಆರ್ಥಿಕ ಧನಸಹಾಯ

Suddi Udaya

ಶ್ರೀ ಕ್ಷೇತ್ರ ಸೌತಡ್ಕಕ್ಕೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಎನ್.ಎಸ್ ಭೇಟಿ

Suddi Udaya

ಶಾಸಕ ಹರೀಶ್ ಪೂಂಜರ ಮನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು: ನಿನ್ನೆಯ ಡೇಟ್ ಹಾಕಿ ಇಂದು ನೋಟಿಸ್ ನೀಡಿದ ಪೊಲೀಸ್ ಇಲಾಖೆ ಶಾಸಕರ ಪರ ವಕೀಲರ ವಾದ

Suddi Udaya

ಎಂ ನಾರಾಯಣ ಬೇಗೂರ್ ರವರಿಗೆ ಶ್ರೀ ರಾಘವೇಂದ್ರ ಮಠದಲ್ಲಿ ಅಭಿನಂದನೆ

Suddi Udaya

ಮಚ್ಚಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದಿಂದ ಮುಂಡ್ರುಪ್ಪಾಡಿ ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya
error: Content is protected !!