25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ವತಿಯಿಂದ ನೃತ್ಯ ಭಜನೋತ್ಸವ

ಬೆಳ್ತಂಗಡಿ; ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ಸೂಳಬೆಟ್ಟು ಇದರ ವತಿಯಿಂದ ಅಳದಂಗಡಿ ಸನಿಹದ ಬರಾಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ರಥಬೀದಿಯಲ್ಲಿ ಮಾ.30 ರಂದು ಸಂಜೆ ನೃತ್ಯ ಭಜನೋತ್ಸವ ನೆರವೇರಿತು.


ದೇವಳದ ಅರ್ಚಕ ಭಾರ್ಗವ ಮರಾಠೆ ಜ್ಯೋತಿ ಪ್ರಜ್ವಾಲನೆ ಮಾಡುವ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಿದರು.

ಕುಣಿತ ಭಜನೆಯ ತರಬೇತುದಾರ ಸಂದೇಶ ಮದ್ದಡ್ಕ ಇವರಿಂದ ತರಬೇತು ಪಡೆದ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ 23 ವಿವಿಧ ಭಜನಾ ಮಂಡಳಿಗಳ 600 ಭಜಕರ ನೃತ್ಯವು ಭಕ್ತಿಯ ಸಂಚಲನಕ್ಕೆ ಕಾರಣವಾಯಿತು. ಉಜಿರೆಯ ಗಾನಸುರಭಿ ತಂಡದವರು ಹಾಡಿದ ಭಜನೆಗಳು ನೃತ್ಯ ಸಂಯೋಜನೆಗೆ ಮತ್ತಷ್ಟು ಮೆರುಗನ್ನು ನೀಡಿತು.


ದಂತ ವೈದ್ಯ ಡಾ| ಶಶಿಧರ ಡೋಂಗ್ರೆ ಹಾಗೂ ಪ್ರಗತಿಪರ ಕೃಷಿಕ ನಿರಂಜನ ಜೋಶಿ ಅವರು ಭಜನಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಿಯನ್ನು ನೀಡಿ ಗೌರವಿಸಿದರು. ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಉಪಸ್ಥಿತರಿದ್ದರು. ಮಂಡಳಿಗಳಿಗೆ, ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತೋಟದಪಲ್ಕೆಯ ನಿವಾಸಿ ಲಕ್ಷ್ಮೀ ಹಾಗೂ ಬರಾಯದ ವಿದ್ಯಾರ್ಥಿ ರವಿ ಎಂಬುವರಿಗೆ ಮಂಡಳಿ ವತಿಯಿಂದ ನೆರವನ್ನು ನೀಡಲಾಯಿತು.

ಸೂಳಬೆಟ್ಟು ಸ,ಕಿ.ಪ್ರಾ.ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ಮತ್ತು ಬಳಗದವರ ನೇತೃತ್ವದಲ್ಲಿ ನಡೆದ ಭಜನಾ ಕಮ್ಮಟದಲ್ಲಿ ರಾಮ್ ಕುಮಾರ್ ಮಾರ್ನಾಡು ಕಾರ್ಯಕ್ರಮ ನಿರ್ವಹಿಸಿದರು.

Related posts

ಲಾಯಿಲ: ಕಾಶಿಬೆಟ್ಟು ಬಳಿ ಇಂಡಸ್ಟ್ರೀಯಲ್ ಎಸ್ಟೇಟ್ ಉದ್ದಿಮೆದಾರರಿಂದ ಪ್ರತಿಭಟನೆಯ ನಾಮಫಲಕ: ಶೀಘ್ರವೇ ಸಮಸ್ಯೆ ಪರಿಹರಿಸದಿದ್ದಲ್ಲಿ ಬಹಿರಂಗ ಪ್ರತಿಭಟನೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಕೊಕ್ಕಡ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

72 ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನಾರಾವಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿರುವ ಎನ್.ಶಶಿಕಾಂತ್ ಜೈನ್ ಅವರಿಗೆ ಕಾಯಕ ದೀಕ್ಷಾಮಣಿ ಪ್ರಶಸ್ತಿ

Suddi Udaya

ಕಳೆಂಜ ನಡುಜಾರು ಸ.ಕಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ: ವಲಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ಸಮಾವೇಶ

Suddi Udaya

ಬೆಳ್ತಂಗಡಿಗೆ ಲಗ್ಗೆ ಇಟ್ಟ ಅತ್ಯಾಧುನಿಕ ‘ಫೋರ್ಸ್ ಅರ್ಬಾನಿಯಾ’-ಐಷಾರಾಮಿ ಪ್ರಯಾಣದ ಹೊಸ ಪರ್ವ ಆರಂಭ

Suddi Udaya
error: Content is protected !!