ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 07 ರಿಂದ ಪ್ರಾರಂಭಗೊAಡು 17ರವರೆಗೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶಶಿಧರ್ ಶೆಟ್ಟಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವವು ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಇಂದು (ಎ02) ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ಉದಯ ಪಾಂಗಾಣ್ಣಯರವರ ನೇತೃತ್ವದಲ್ಲಿ ಸಂಜೆ 4 ಗಂಟೆಯಿಂದ ದೇವರ ಸನ್ನಿಧಿಯಲ್ಲಿ ಮತ್ತು ನಾಗರಕಟ್ಟೆಯಲ್ಲಿ ರಾಕ್ಷೋಘ್ನ ಹೋಮ, ವಾಸ್ತು ಹೋಮ, ಶ್ರೀ ದುರ್ಗೆ, ಶ್ರೀ ಗಣಪತಿ, ಶ್ರೀ ಶಾಸ್ತಾ ಹಾಗೂ ದೈವಗಳ ಅಧಿವಾಸ ಹೋಮಗಳು ನಡೆಯಲಿದೆ.
ಎ.03 ಬುಧವಾರ ಬೆಳಿಗ್ಗೆ 09-19ರ ವೃಷಭ ಲಗ್ನದಲ್ಲಿ ಶ್ರೀ ದುರ್ಗೆ, ಶ್ರೀ ಗಣಪತಿ, ಶ್ರೀ ಶಾಸ್ತಾ ದೇವರ, ಶ್ರೀ ನಾಗ ದೇವರ , ಅಭಯನಂದಿ ಹಾಗೂ ದೈವಗಳ ಪ್ರತಿಷ್ಠೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅದೇ ರೀತಿ ಸಂಜೆ 7.30 ರಿಂದ ಯಕ್ಷ ಬಿಂದು ಹವ್ಯಾಸಿ ಯಕ್ಷಗಾನ ತಂಡ ಉಜಿರೆ ಕಲಾವಿದರಿಂದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ನಡೆಯಲಿದೆ.