24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ: ಚುನಾವಣೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿ : 24 ಗಂಟೆಯೂ ಸಂಚರಿಸುವ ವಾಹನಗಳ ಪರಿಶೀಲನೆ

ಬೆಳ್ತಂಗಡಿ : ಚುನಾವಣೆಯ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುತ್ತಿದ್ದಂತೆ ಚುನಾವಣೆಗಾಗಿ ನಿರ್ಮಿಸಲಾದ ವಿಶೇಷ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಂಡಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಚಾರ್ಮಾಡಿ ಹಾಗೂ ನಾರಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸುವ ಚೆಕ್ ಪೋಸ್ಟ್ ಗಳನ್ನು ಈಗಾಗಲೇ ತೆರೆಯಲಾಗಿದೆ. ದಿನದ 24 ಗಂಟೆಯೂ ಇವುಗಳ ಮೂಲಕ ಸಂಚರಿಸುವ ವಾಹನಗಳನ್ನು ಪರಿಶೀಲಿಸಿ ಮುಂದೆ ಬಿಡಲಾಗುತ್ತದೆ.


ಪ್ರತಿವಾಹನವನ್ನು ನಿಲ್ಲಿಸಿ ಅದರಲ್ಲಿ ಸಾಗಾಟ ಮಾಡುವ ವಸ್ತುಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಓರ್ವ ಸ್ಟಾಟಿಕ್ ಸರ್ವೆ ಲೈನ್ ಲೀಡರ್, ಅಬಕಾರಿ ಪೊಲೀಸ್, ಟ್ರಾಫಿಕ್ ಪೊಲೀಸ್, ಸ್ಥಳೀಯ ಠಾಣೆಯ ಪೊಲೀಸ್,ವಿಡಿಯೋ ಗ್ರಾಫರ್ ಸೇರಿದಂತೆ ಮೂರು ಪಾಳಿಗಳಲ್ಲಿ ಬೇರೆ ಬೇರೆ ತಂಡಗಳು ಕಾರ್ಯನಿರ್ವಹಿಸುತ್ತವೆ. ಇದು ಚುನಾವಣಾ ನೀತಿ ಸಂಹಿತೆ ಕೊನೆಗೊಳ್ಳುವವರೆಗೂ ಮುಂದುವರಿಯಲಿದೆ.


ಕಾರ್ಯನಿರ್ವಹಿಸದ ಗೇಟ್
ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಗೇಟ್ ಇದ್ದರು ಅದು ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಕಾರಣದಿಂದ ಇಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನ ತಪಾಸಣೆ ನಡೆಸಲಾಗುತ್ತದೆ. ಪರಿಸರದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯು ನಡೆಯುತ್ತಿದ್ದು ವಿಪರೀತ ಧೂಳಿನ ವಾತಾವರಣವು ಕಂಡು ಬರುತ್ತದೆ. ಇಲ್ಲಿ ರಸ್ತೆಯು ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೂ ಸಮಸ್ಯೆ ಇದೆ. ತಪಾಸಣೆ ಸಂದರ್ಭ ವಾಹನಗಳ ಸರತಿಯು ಹೆಚ್ಚುತ್ತಿದೆ.


ಪಂಚಾಯಿತಿ ಕೆಲಸ ಕುಂಠಿತ
ಚೆಕ್ ಪೋಸ್ಟ್ ಗಳಲ್ಲಿ ಕೆಲವು ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಇವರು ನೀತಿ ಸಂಹಿತೆ ಕೊನೆಗೊಳ್ಳುವವರೆಗೂ ಕಾರ್ಯನಿರ್ವಹಿಸಬೇಕಾಗಿದೆ ದಿನದ 8 ಗಂಟೆ ಇವರಿಗೆ ಕಡ್ಡಾಯ ಚೆಕ್ ಪೋಸ್ಟ್ ನಿರ್ವಹಣೆ ಜವಾಬ್ದಾರಿ ಇರುತ್ತದೆ. ಈ ಕಾರಣದಿಂದ ಪಂಚಾಯಿತಿಗಳಿಗೆ ಹೋಗಲು ಸಮಯಾವಕಾಶ ಸಿಗುವುದಿಲ್ಲ ಇದರಿಂದ ಯಾವ ಪಂಚಾಯಿತಿಗಳ ಪಿಡಿಒಗಳಿಗೆ ಹಾಗೂ ಸಿಬ್ಬಂದಿಗಳಿಗೆ ಚೆಕ್ ಪೋಸ್ಟ್ ಜವಾಬ್ದಾರಿ ನೀಡಲಾಗಿದೆಯೇ ಅಂತಹ ಪಂಚಾಯಿತಿಗಳ ಗ್ರಾಮಸ್ಥರ ಕೆಲಸಗಳು ಸಾಗುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Related posts

ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಅಡ್ಡ ಬಂದ ಒಂಟಿ ಸಲಗ

Suddi Udaya

ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆಗೆ (ರಾಜ್ಯಪಠ್ಯಕ್ರಮ) ಶೇ. 100 ಫಲಿತಾಂಶ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪ್ರಚಂಡ ಗೆಲುವು: ಅಭಿವೃದ್ಧಿಗೆ ಸಂದ ಭರ್ಜರಿ ಜಯ: ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂಗೆ ಸೋಲು

Suddi Udaya

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪೌರ ಕಾರ್ಮಿಕರು

Suddi Udaya
error: Content is protected !!