ಬೆಳ್ತಂಗಡಿ; ಹೆಣ್ಣು ಮಕ್ಕಳಿಗೆ ತಮ್ಮ ಮನೆಯಲ್ಲಿ ಸ್ವತಂತ್ರ ನೀಡಿದರೆ ಮಾತ್ರ ಅವರು ತಮ್ಮ ಜೀವನಲ್ಲಿ ಉತ್ತಮ ಸ್ಥಾನಕ್ಕೆ ಬೆಳೆಯಲು ಸಾಧ್ಯ, ಆಗ ದೇಶ ಮುಂದುವರೆಯುತ್ತದೆ ಎಂದು ಬೆಳ್ತಂಗಡಿ ಮಹಿಳಾ ಸಹಕಾರಿ ಬ್ಯಾಂಕ್ ಸಿಇಓ ಹಾಗೂ ಕನ್ಯಾಡಿ ಸೇವಾಭಾರತಿ(ರಿ) ಅಧ್ಯಕ್ಷರು ಸ್ವರ್ಣ ಗೌರಿ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಬೆಳ್ತಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್ “ಪಿಕ್ಚರ್ ಹರ್ ಇಂಪ್ಯಾಕ್ಟ್” ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಾ. 31ರಂದು ಬೆಳ್ತಂಗಡಿಯ ಲಯನ್ಸ್ ಭವನದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು ಹೆಣ್ಣು ಮಕ್ಕಳು ತಮ್ಮ ಶಿಕ್ಷಣಕ್ಕೆ ಮನೆ ಬಿಟ್ಟು ಹೊರಗೆ ಹೋಗಬೇಕು, ಆದರೆ ತಮ್ಮ ಸಂಸ್ಕೃತಿ ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ಮಹಿಳಾ ದಿನದ ಅಂಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಅವರಿಗೆ ಸ್ಫೂರ್ತಿ ನೀಡಿದ ಮಹಿಳೆಯೊಂದಿಗಿನ ಫೋಟೋವನ್ನು ಹಂಚಿಕೊಳ್ಳಲು ಮತ್ತು ಅವರ ಬಗ್ಗೆ ಶೀರ್ಷಿಕೆ ಬರೆಯಲು ಕೇಳಲಾಗಿತ್ತು. ಸ್ಪರ್ಧೆಯಲ್ಲಿ ಹಲವಾರು ಭಾಗವಹಿಸಿದ್ದು ಪ್ರಥಮ ಸ್ಥಾನ ವೀಣಾ ಮತ್ತು ದ್ವಿತೀಯ ಸ್ಥಾನ ರೀನಾ ಇವರಿಗೆ ಲಭಿಸಿದೆ.
ಕಾರ್ಯಕರ್ಮದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಎಲ್.ಎನ್. ಉಮೇಶ್ ಶೆಟ್ಟಿ, ಕಾರ್ಯದರ್ಶಿ ಎಲ್.ಎನ್.ಅನಂತ್ ಕೃಷ್ಣ, ಲಿಯೋ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಲಿಯೋ ಅಪ್ಸರಾ ಎಚ್.ಆರ್.ಗೌಡ, ಕಾರ್ಯದರ್ಶಿ ಲಿಯೋ ನಿರೀಕ್ಷ ಎನ್ ಮತ್ತಿತರತು ಉಪಸ್ಥಿತರಿದ್ದರು.
ಲಿಯೋ ಅಪ್ಸರಾ ಎಚ್.ಆರ್.ಗೌಡ ಸ್ವಾಗತಿಸಿ, ಲಿಯೋ ನಿರೀಕ್ಷ ಎನ್ ವಂದಿಸಿ, ಲಿಯೋ ಭಾಷಿಣಿ ಕಾರ್ಯಕ್ರಮ ನಿರೂಪಿಸಿದರು