24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.13-23: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ       

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ  ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ  ಹೆಗ್ಗಡೆಯವರ ನೇತೃತ್ವದಲ್ಲಿ  ಎ.13 ಮೇಷ ಸಂಕ್ರಮಣದಿಂದ ಮೊದಲ್ಗೊಂಡು  ಎ.23 ರವರೆಗೆ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.                                                         

ಎ.13 ಕ್ರೋಧಿ ಸಂವತ್ಸರದ ಮೇಷ ಸಂಕ್ರಮಣದಂದು ರಾತ್ರಿ ಧ್ವಜಾರೋಹಣ, ಎ.14  ರಂದು ಸೌರಮಾನ (ವಿಷು)ಯುಗಾದಿ, ಧರ್ಮ ನೇಮ, ಎ.15 ರಂದು ಅಣ್ಣಪ್ಪ ದೈವಗಳ ನೇಮ, ಶ್ರೀ ಮಂಜುನಾಥ ಸ್ವಾಮಿ ಉತ್ಸವ, ಎ 16 ರಂದು ಶ್ರೀ ಮಂಜುನಾಥ ಸ್ವಾಮಿ ಉತ್ಸವ, ಎ.17 ರಂದು ಬೈಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ಎ 18  ರಂದು ಕಂಚಿಮಾರುಕಟ್ಟೆ ಉತ್ಸವ, ಎ.19 ರಂದು ಲಲಿತೋದ್ಯಾನವನ ಕಟ್ಟೆ ಉತ್ಸವ, ಎ. 2೦ರಂದು ಕೆರೆಕಟ್ಟೆ ಉತ್ಸವ, ಎ 21 ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ  ರಥೋತ್ಸವ, ಎ. 22 ರಂದು ರಾತ್ರಿ ಶ್ರೀ ಮನ್ಮಹಾರಥೋತ್ಸವ, ಎ 23 ರಂದು  ನೇತ್ರಾವತಿ ನದಿಯಲ್ಲಿ ಶ್ರೀ ದೇವರ ಅವಭ್ರತಸ್ನಾನ ಹಾಗೂ ರಾತ್ರಿ ಧ್ವಜಾವರೋಹಣ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ. 

Related posts

ಮುಂಡಾಜೆ: ಕೀರ್ತನಾ ಕಲಾತಂಡದಿಂದ ಕನಕ ಜಯಂತಿ ಆಚರಣೆ

Suddi Udaya

ತೆಂಕಕಾರಂದೂರು: ಕಟ್ಟೆಯ ಸಾರ್ವಜನಿಕ ಬಸ್ಸು ತಂಗುದಾಣ ಕುಸಿತ

Suddi Udaya

ಜೆಸಿಐ ಮಡಂತ್ಯಾರು “ವಿಜಯ 2024” ವತಿಯಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ನಲ್ಲಿ ಬಂಪರ್ ಲಕ್ಕಿ ಡ್ರಾ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Suddi Udaya

ಉಜಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭ

Suddi Udaya
error: Content is protected !!