28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಅರಸಿನಮಕ್ಕಿ: ಮನೆಗೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ಬೈದು , ಜೀವ ಬೆದರಿಕೆ: ಪೊಲೀಸ್ ಠಾಣೆಗೆ ದೂರು

ಹತ್ಯಡ್ಕ : ಇಲ್ಲಿಯ ಅರಸಿನಮಕ್ಕಿ ನಿವಾಸಿ ಸೀತಾರಾಮ ರೈ ರವರ ಮನೆಯ ಅಂಗಳಕ್ಕೆ ನೆರೆಕರೆಯ ನಿವಾಸಿ ದಿಲೀಪ್‌ ಎಂಬಾತನು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು , ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಹತ್ಯಡ್ಕ ಗ್ರಾಮ, ಅರಸಿನಮಕ್ಕಿ ನಿವಾಸಿ ಸೀತಾರಾಮ ರೈ, (ಪ್ರಾಯ: 48) ಎಂಬವರ ದೂರಿನಂತೆ, ಎ. 02 ರಂದು ರಾತ್ರಿ, ಹತ್ಯಡ್ಕ ಗ್ರಾಮದ ಬನತ್ತಡಿ ಎಂಬಲ್ಲಿರುವ ಸೀತಾರಾಮ ಮನೆಯ ಅಂಗಳಕ್ಕೆ ನೆರೆಕೆರೆಯ ನಿವಾಸಿ ಆರೋಪಿ ದಿಲೀಪ್‌ ಎಂಬಾತನು ಕೈಯಲ್ಲಿ ಕಬ್ಬಿಣದ ದೊಣ್ಣೆಯನ್ನು ಹಿಡಿದು ಅಕ್ರಮ ಪ್ರವೇಶ ಮಾಡಿ, ಸೀತಾರಾಮ ರವರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕಲ್ಲೊಂದನ್ನು ಅವರ ಪತ್ನಿಯ ತಲೆಗೆ ಬಿಸಾಡಿ ಜೀವ ಬೆದರಿಕೆ ಹಾಕಿರುತ್ತಾನೆ , ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/2024 ಕಲಂ: 447, 504, 324, 506 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಉಜಿರೆ: ಗಾಂಧಿನಗರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ

Suddi Udaya

ಸಂಜೀವಿನಿ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸರಕಾರದಿಂದ ಸಮ್ಮತಿ

Suddi Udaya

ಮಚ್ಚಿನದಲ್ಲಿ 1250 ಬಿದಿರು ಗಿಡ ವಿತರಣಾ ಕಾರ್ಯಕ್ರಮ

Suddi Udaya

ಮಡಂತ್ಯಾರು ವಲಯ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಗುರುವಾಯನಕೆರೆ ಗೆಳೆಯರ ಬಳಗದ ಪದಾಧಿಕಾರಿಗಳ ಆಯ್ಕೆ

Suddi Udaya

‘ಕರ್ಂಗೋಲು ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಕುದ್ಕಬಚ್ಚಿರೆ’ ಕಥಾ ಸಂಕಲನ ಬಿಡುಗಡೆ

Suddi Udaya
error: Content is protected !!