28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

ತೆಂಕಕಾರಂದೂರು: ಫೇಸ್‌ ಬುಕ್‌ ಆಪ್‌ ನಲ್ಲಿ Money View Personal Loan (LTD) ಆಪ್‌ ಮೂಲಕ ಅಪರಿಚಿತರು ಲೋನ್ ಕೊಡುವುದಾಗಿ ಪರಿಚಯಿಸಿಕೊಂಡಿದ್ದು ವಿವಿಧ ಹಂತದಲ್ಲಿ ರೂ 96,743 ನ್ನು ಹಣವನ್ನು‌ ಆನ್ ಲೈನ್ ಮುಲಕ ವರ್ಗಾಯಿಸಿಕೊಂಡಿದ್ದು, ಆರೋಪಿತರು ಸಾಲವನ್ನು ನೀಡದೇ, ಹಣವನ್ನು ಹಿಂತಿರುಗಿಸದೇ ವಂಚಿಸಿರುವ ಘಟನೆ ನಡೆದಿದೆ.

ತೆಂಕಕಾರಂದೂರು ನಿವಾಸಿ ಶ್ರೀಮತಿ ನೆಬಿಸಾ (38) ಎಂಬವರ ದೂರಿನಂತೆ, ಮಾ.21 ರಂದು ಪಿರ್ಯಾದಿದಾರರಿಗೆ ಪೇಸ್‌ ಬುಕ್‌ ಆಪ್‌ ನಲ್ಲಿ Money View Personal Loan (LTD) ಆಪ್‌ ಮೂಲಕ, ಅಪರಿಚಿತ ಆರೋಪಿತರು ಪರಿಚಯಿಸಿಕೊಂಡಿದ್ದು, ನೆಬಿಸಾ ಲೋನ್ ಬಗ್ಗೆ ಆರೋಪಿತರಿಂದ ಮಾಹಿತಿ ಪಡೆದು 5 ಲಕ್ಷ ಲೋನ್‌ ಪಡೆಯುವರೇ ಆರೋಪಿತರಿಗೆ ದಾಖಲೆ ಪತ್ರಗಳನ್ನು ಕಳುಹಿಸಿರುತ್ತಾರೆ.

ಬಳಿಕ ಆರೋಪಿತರು ಪೋನ್‌ ಮೂಲಕ ಸಂಪರ್ಕಿಸಿ, ಮಾ. 28 ರ ತನಕ ವಿವಿಧ ಹಂತದಲ್ಲಿ ಒಟ್ಟು ರೂ 96,743 ನ್ನು ಹಣವನ್ನು‌ ಆನ್ ಲೈನ್ ಮುಲಕ ವರ್ಗಾಯಿಸಿಕೊಂಡಿದ್ದು, ಆರೋಪಿತರು ನೆಬಿಸಾರವರಿಗೆ ಸಾಲವನ್ನು ನೀಡದೇ, ಹಣವನ್ನು ಹಿಂತಿರುಗಿಸದೇ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ 35/2024 ಕಲಂ: 66 (C), (D) IT Act & ಕಲಂ: 417,420 IPC ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮಲವಂತಿಗೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮೇಲಂತಬೆಟ್ಟು ಕುಸುಮಾವತಿ ನಿಧನ

Suddi Udaya

ವೇಣೂರು ಆರಕ್ಷಕ ಠಾಣೆಯಲ್ಲಿ ಮಿಲಾದುನ್ನೆಭಿ ಪ್ರಯುಕ್ತ ಶಾಂತಿ ಸಭೆ

Suddi Udaya

ಉಜಿರೆ:ಎಸ್‌.ಡಿ.ಎಂ ಅಂತರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಸಮಾರೋಪ

Suddi Udaya

ಶಾಸಕ ಹರೀಶ್ ಪೂಂಜಾರವರ ಜನುಮದಿನದ ಪ್ರಯುಕ್ತ ಬಂದಾರು ಅಭಿಮಾನಿ ಬಳಗದಿಂದ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಾಂಸ್ಥಿಕ ತರಬೇತಿ ಕಾರ್ಯಕ್ರಮ

Suddi Udaya
error: Content is protected !!