ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ ಬೇಸಿಗೆ ಶಿಬಿರದ 2ನೇ ದಿನ ಶಾಲಾ ಶಿಕ್ಷಕಿಯರಾದ ಶ್ರೀಮತಿ ದಿವ್ಯಶ್ರೀ, ಶ್ರೀಮತಿ ಸಂಧ್ಯಾ, ಕುಮಾರಿ ಲೋಲಾಕ್ಷಿ ಶ್ರೀಮತಿ ಹೇಮಾವತಿ, ಶ್ರೀಮತಿ ಸ್ವಾತಿ ಯವರ ಸಲಹೆ-ಸೂಚನೆ, ಮಾಗ೯ದರ್ಶನ ಹಾಗೂ ಪಾಲ್ಗೊಳ್ಳುವಿಕೆಯಲ್ಲಿ ಕುಂಟೆಬಿಲ್ಲೆ, ಲಗೋರಿ, ಟೋಪಿ ಬೇಕಾ ಟೋಪಿ, ಸೊಪ್ಪಾಟ, ಕಲ್ಲಾಟ, ಪಗಡೆಯಾಟ, ಅಡಿಕೆ ಹಾಳೆಯಲ್ಲಿ ಕುಳಿತು ಎಳೆಯುವುದು, ಚೆನ್ನೆಮಣೆ ಆಟಗಳು, ತೆಂಗಿನ ಮರದ ಎಲೆಗಳಿಂದ ವಾಚು, ಕನ್ನಡಕ, ಹಾವು, ಗಿರಗಿಟ್ಟೆ ಮಾಡಲಾಯಿತು. ವಿದ್ಯಾರ್ಥಿಗಳು ಆಟದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.
ಬೇಸಿಗೆ ಶಿಬಿರದ 3ನೇ ದಿನ ಸೀರೆಯ ಸೆರಗಿಗೆ ಗೊಂಡೆ ಹಾಕುವುದು. ಇದರ ಬಗ್ಗೆ ಆಶಾ ಕಾರ್ಯಕರ್ತೆಯಾದ ಶ್ರೀಮತಿ ಸರೋಜಿನಿಯವರು ತರಬೇತಿಯನ್ನು ನೀಡಿದರು. ಹಾಗೂ ಮುರಳಿ ಬ್ರದರ್ಸ್ ಡಾನ್ಸ್ ತಂಡದವರು ನೃತ್ಯ ತರಬೇತಿಯನ್ನು ನೀಡಿದರು.
ಶಿಬಿರದ 4ನೇ ದಿನ ಚಿತ್ರಕಲೆ ತರಬೇತಿಯನ್ನು ಶಾಲಾ ಹಳೆ ವಿದ್ಯಾರ್ಥಿಯಾದ ಸಂತೋಷ್ ಗೋಖಲೆಯವರು ನೀಡಿದರು. ಶಾಲಾ ಶಿಕ್ಷಕಿ ಕುಮಾರಿ ಲೋಲಾಕ್ಷಿ ಯವರು ತುಳು ಲಿಪಿಯನ್ನು ಕಲಿಸಿಕೊಟ್ಟರು. ಮತ್ತು ಹಳೇ ಬಟ್ಟೆಗಳಿಂದ ಕಾಲು ಒರೆಸುವ ಮ್ಯಾಟ್ ತಯಾರಿಸಲು ವಿದ್ಯಾರ್ಥಿಗಳಿಗೆ ಶ್ರೀಮತಿ ಸರೋಜಿನಿಯವರು ಕಲಿಸಿಕೊಟ್ಟರು. ಎಲ್ಲಾ ವಿದ್ಯಾರ್ಥಿಗಳು ಈ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.