39.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ರವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಕಾರ್ಯ

ಬೆಳ್ತಂಗಡಿ: ಸದಾ ಸೇವೆಯಲ್ಲಿ ತನ್ನನ್ನು ತಾನು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ವಿಭಿನ್ನ ಶೈಲಿಯ ಸಾಮಾಜಿಕ ಶೈಕ್ಷಣಿಕ ಕ್ರೀಡಾ ಶಿಕ್ಷಣ ಕೆಲಸಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ರಾಜ ಕೇಸರಿ ಸಂಘಟನೆಯ 547 ಸೇವಾ ಯೋಜನೆ ಪ್ರಯುಕ್ತ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಲೀಲಾವತಿ ಅವರ ಹೊಸ ಮನೆ ಮೈರಾರು ಓಡಿಲ್ನಾಳ ಇವರ ಮನೆಯ ವೈರಿಂಗ್ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು. ಅದನ್ನು ಪೂರ್ಣಗೊಳಿಸಿ ಇವತ್ತು ಅವರಿಗೆ ಹಸ್ತಾಂತರಿಸಲಾಯಿತು.


ಮನೆಯ ಸಂಪೂರ್ಣ ವೈರಿಂಗ್ ಕೆಲಸ ಮತ್ತು ಖರ್ಚು ವೆಚ್ಚಗಳನ್ನು ಲೋಬೊ ಟವರ್ಸ್ ನಲ್ಲಿರುವ ಗಣೇಶ್ ಎಲೆಕ್ಟ್ರಿಕಲ್ಸ್ ಕೆ ಬಿ ರೋಡ್. ಇದರ ಮಾಲಕರಾದ ಯಜ್ಞೇಶ್ ರೈ .. ಇವರ ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಈ ದಿನದ ಹುಟ್ಟುಹಬ್ಬವನ್ನು ಲೀಲಾವತಿಯವರ ಹೊಸ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಷನ್, ರಾಜ ಕೇಸರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ, ಸದಸ್ಯರುಗಳಾದ ದೇವರಾಜ್, ಸಂದೇಶ್, ಶ್ರೀನಿವಾಸ್ ಮಂಜೊಟ್ಟಿ ಉಪಸ್ಥಿತರಿದ್ದರು

Related posts

ಚಾರ್ಮಾಡಿ ಘಾಟಿ ಪರಿಸರದ ಬಾರಿಮಲೆಯಲ್ಲಿ ಬೆಂಕಿ

Suddi Udaya

ಕೊಕ್ಕಡ: ಹಳ್ಳಿಂಗೇರಿ ನಿವಾಸಿ ದಿನೇಶ್ ನಿಧನ

Suddi Udaya

ಬೆಳ್ತಂಗಡಿ : ಹಳೇಕೋಟೆ ಬಳಿ ಪಿಕಪ್ ಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು ; ಮತ್ತೋರ್ವ ಗಂಭೀರ

Suddi Udaya

ವಾಣಿ ಪ.ಪೂ. ಕಾಲೇಜಿನ ರಿತ್ವಿಕ್ ಶೆಟ್ಟಿ ಏಕಪಾತ್ರ ಅಭಿನಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya

ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ: ಸರ್ವಾರ್ಥ್ ಎಸ್. ಜೈನ್‌ ವೇಣೂರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ

Suddi Udaya
error: Content is protected !!