September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಂಗಡಿ ಇವರ ಅಧ್ಯಕ್ಷತೆಯಲ್ಲಿ ಸೆ.15ರಂದು ಗುರುವಾಯನಕೆರೆ ಬಂಟರಭವನದಲ್ಲಿ ನಡೆಯಿತು.

ಸಂಘವು ವರದಿ‌ ಸಾಲಿನಲ್ಲಿ ರೂ.721 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ.2.50 ಕೋಟಿ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಂಗಡಿ ಸದಸ್ಯರಿಗೆ ಶೇ.18 ಡಿವಿಡೆಂಟ್ ಘೋಷಿಸಿದರು.

ನಿರ್ದೇಶಕರಾದ ಬಿ. ಸೀತಾರಾಮ ಶೆಟ್ಟಿ ಮಂಗಳೂರು, ಬಾಲಕೃಷ್ಣ ಪೂಂಜ ಮದ್ದಡ್ಕ, ನಾರಾಯಣ ಶೆಟ್ಟಿ ಕುಂಟಿನಿ, ಕೃಷ್ಣ ರೈ ಟಿ. ಸಬರಬೈಲು, ರಘುರಾಮ ಶೆಟ್ಟಿ “ಸಾಧನಾ” ಉಜಿರೆ, ಶ್ರೀಮತಿ ಅಂಬಾ ಬಿ. ಆಳ್ವ ಶ್ರೀರಕ್ಷಾ ನಾಳ, ಪುರಂದರ ಶೆಟ್ಟಿ ಪಾಡ್ಯಾರ್, ಜಯರಾಮ ಭಂಡಾರಿ ಎಂ. ಧರ್ಮಸ್ಥಳ, ಶ್ರೀಮತಿ ಸಾರಿಕಾ ಶೆಟ್ಟಿ ಧರ್ಮಸ್ಥಳ ಹಾಗೂ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ, ನಿರೂಪಿಸಿದರು. ಸಿಬ್ಬಂದಿಗಳಾದ ರಂಜನ್ ಹಾಗೂ ಶ್ರೀಮತಿ ಸವಿತಾ ಪ್ರಾರ್ಥಿಸಿದರು. ನಿರ್ದೇಶಕರಾದ ರಘುರಾಮ ಶೆಟ್ಟಿ ಸ್ವಾಗತಿಸಿ, ಜಯಂತ್ ಶೆಟ್ಟಿ ಧನ್ಯವಾದವಿತ್ತರು.

Related posts

ಅಳದಂಗಡಿಯಲ್ಲಿ Vakrangee ಯುಪಿಐ ಮಿನಿ ಎಟಿಎಂ ಕೇಂದ್ರ ಶುಭಾರಂಭ

Suddi Udaya

ಕಲ್ಮಂಜ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮ: ಗುರುನಮನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಗಡಾಯಿಕಲ್ಲು – ಕಡಮಗುಂಡಿ ಫಾಲ್ಸ್ ಪ್ರವಾಸಿಗರ ವೀಕ್ಷಣೆಗೆ ಮುಕ್ತ

Suddi Udaya

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ.

Suddi Udaya

ಧರ್ಮಸ್ಥಳದ ಕು. ಸೌಖ್ಯ ಎಸ್. ಜೈನ್ ಮಂಡಿಸಿದ ಸಂಶೋಧನಾ ಪ್ರಬಂಧಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ

Suddi Udaya

ಬೆಳ್ತಂಗಡಿ ಯೋಜನಾ ಪ್ರಾಧಿಕಾರ ರಚನೆಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತ ಶಿವಾನಂದ ಕಾಪಶಿ ಹಾಗೂ ನಗರ–ಗ್ರಾಮಾಂತರ ಯೋಜನಾ ಆಯುಕ್ತರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya
error: Content is protected !!