ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ , ಗ್ರಾಮ ಪಂಚಾಯತ್ ಮಾಲಾಡಿ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯದ ಆಶ್ರಯದಲ್ಲಿ ಎ.05 ರಂದು ಮತದಾರರ ಜಾಗೃತಿ ಕಾರ್ಯಕ್ರಮವನ್ನು ದ.ಕ.ಜಿ.ಪ.ಉ. ಹಿ .ಪ್ರಾ ಶಾಲೆ ಮಾಲಾಡಿ ಇಲ್ಲಿ ನಡೆಸಲಾಯಿತು.
ನಂತರ ಮಕ್ಕಳಲ್ಲಿ ತಮ್ಮ ಮನೆಯಲ್ಲಿರುವ ಎಲ್ಲಾ ಮತದಾರರು ಮತ ಹಾಕುವಂತೆ ತಿಳಿಸಲು ಹೇಳಲಾಯಿತು.
ವಿಶೇಷವಾಗಿ ಮಕ್ಕಳು ಅವರವರ ಸ್ನೇಹಿತರ ಮನೆಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಂತಿಸಿ ಪತ್ರ ಬರೆದು ಪೋಸ್ಟ್ ಮಾಡುವಂತೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಬೆಳ್ತಂಗಡಿಯ ಕಾರ್ಯನಿರ್ವಾಹಕ ಅಧಿಕಾರಿ ವೈಜಣ್ಣ , ತಾ.ಪಂ.ಕಛೇರಿ ಅಧೀಕ್ಷಕ ಪ್ರಶಾಂತ್ ಜೈನ್ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯೋಗೇಶ್. ಎಚ್.ಆರ್ ಹಾಗೂ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಯಶೋಧರ ಶೆಟ್ಟಿ , ಹಾಗೂ ಶಾಲಾ ಮುಖ್ಯೋಪಾಧ್ಯರು, ಶಿಕ್ಷಕವೃಂದ, ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.