April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಬೇಸಿಗೆ ಶಿಬಿರವು ಸಮಾರೋಪಗೊಂಡಿತು. ಹಿರಿಯ ಶಿಕ್ಷಕಿ ಶ್ರೀಮತಿ ರಾಜಶ್ರೀಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರೋಪ ದಿನದ ಶಿಬಿರದಲ್ಲಿ ಕಥೆ, ಕವನ ಮತ್ತು ವರದಿಗಾರಿಕೆ ಬಗ್ಗೆ ಬರವಣಿಗೆ ಕಮ್ಮಟ ಹಾಗೂ ಮಿಮಿಕ್ರಿ, ಜಾನಪದ ಗೀತೆಗಳ ಗಾಯನ ಪ್ರಾತ್ಯಕ್ಷಿಕೆ, ತರಬೇತಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಪೂಜ, ಪೂರ್ಣಶ್ರೀ, ಲಿಖಿತ ಮತ್ತು ಪ್ರಸಾದ್ ಶೆಟ್ಟಿ ಮುಂಡಾಜೆ ಇವರು ಆಗಮಿಸಿದ್ದರು.

ವೇದಿಕೆಯಲ್ಲಿ ಶಿಕ್ಷಕರಾದ ಕೃಷ್ಣಾನಂದ, ಸುಮನ್ ಯು ಎಸ್, ಶ್ರೀಮತಿ ಕೋಕಿಲ ಮತ್ತು ಶ್ರೀಮತಿ ಚಿತ್ರಾ ರವರು ಉಪಸ್ಥಿತರಿದ್ದರು.
ಮಕ್ಕಳಿಂದಲೆ ಕಾರ್ಯಕ್ರಮವು ಪೂರ್ಣವಾಗಿ ಸಂಯೋಜಿಸಲ್ಪಟ್ಟಿತು.

Related posts

ಮದ್ದಡ್ಕ ನಿವಾಸಿ ಬೆಲ್ಚೆರ್ ಕ್ರಾಸ್ತ ಹೃದಯಾಘಾತದಿಂದ ನಿಧನ

Suddi Udaya

ಮಡಂತ್ಯಾರು: ಬಿ ಎಂ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಸಭೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಕವಿ ಮಾಸ್ತಿ ಸಂಸ್ಮರಣೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

Suddi Udaya

ಮಾಲಾಡಿ ಶಾಲಾ ವಿದ್ಯಾರ್ಥಿಗಳಿಗೆ ದಾನಿ ಹಾಜಿ ಲತೀಫ್ ಸಾಹೇಬ್‌ ಕೊಡುಗೆಯಾಗಿ ನೀಡಿದ ಉಚಿತ ನೋಟ್ ಪುಸ್ತಕಗಳ ವಿತರಣೆ

Suddi Udaya
error: Content is protected !!