ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕವು ಎ.7ರಿಂದ ಪ್ರಾರಂಭಗೊಂಡು ಎ.12 ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ ತಂತ್ರಿಗಳ ಸ್ವಾಗತ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ತೋರಣ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ್ ಅಜಿಲರು, ಆಡಳಿತ ಮೊಕ್ತೇಸರರು ದೇವೇಂದ್ರ ಹೆಗ್ಡೆ, ಆಡಳಿತ ಮಂಡಳಿಯ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಕ್ಷೇತ್ರದ ತಂತ್ರಿಗಳು ಬ್ರಹ್ಮಶ್ರೀ ವೇದಮೂರ್ತಿ ಬಾಲಕೃಷ್ಣ ಪಾಂಗಾಣ್ಣಾಯರು, ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ ಮರೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಸುವರ್ಣ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್, ಕೋಶಾಧಿಕಾರಿ ಅಣ್ಣಪ್ಪ ಹೆಗ್ಡೆ, ಕಾರ್ಯದರ್ಶಿ ಚಂದ್ರಶೇಖರ ಮೂಡಾಯಿನಡೆ, ಜೊತೆಕಾರ್ಯದರ್ಶಿಗಳಾದ ಪದ್ಮಶ್ರೀ ಜೈನ್, ಅಶೋಕ್ ಪೂಜಾರಿ, ಶ್ರೀಮತಿ ಧಮಯಂತಿ, ಉಪಾಧ್ಯಕ್ಷರುಗಳಾದ ರವೀಂದ್ರ ಹೆಗ್ಡೆ, ದಿವಾಕರ ಹೆಗ್ಡೆ, ವಿಜಯ ಕುಮಾರ್ ಬಂಗ, ಶ್ರೀಮತಿ ಸುಫಲಾ, ಲಿಂಗಪ್ಪ ಪೂಜಾರಿ , ರತ್ನಾಕರ ಬುಣ್ಣನ್, ವಿಜಯ ಆರಿಗ, ಎಂ.ಎಸ್ ಪೂಜಾರಿ, ರಾಧಕೃಷ್ಣ ಹೆಗ್ಡೆ, ಸುಜಯ ಹೆಗ್ಡೆ, ಶ್ರೀಧರ ಆಚಾರ್ಯ, ಸುರೇಂದ್ರ ಪೂಜಾರಿ, ಶ್ರೀಧರ ಪೂಜಾರಿ ಹಾಗೂ ಊರವರು ಉಪಸ್ಥಿತರಿದ್ದರು.
ನಂತರ ಸಂಜೆ 4.00 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನರ್ತಿಕಲ್ಲು ಮಹಮ್ಮಾಯಿ ಕಟ್ಟೆಯಿಂದ ಹೊರಡಲಿದ್ದು ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನ ಅಧ್ಯಕ್ಷರು ಶಿವಪ್ರಸಾದ್ ಅಜಿಲರು ಚಾಲನೆ ನೀಡಲಿದ್ದಾರೆ.
ಸಂಜೆ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ, ಹಾಗೂ ಗಾನ ವೈಭವ ನಡೆಯಲಿದೆ.