April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧ.ಮಂ. ಪ್ರಕೃತಿ ಮತ್ತು ಯೋಗ ಕಾಲೇಜು: ಯಶಸ್ವಿ ಚಿಣ್ಣರ ಯೋಗ ತರಬೇತಿ ಶಿಬಿರದ ಸಮಾರೋಪ

ಉಜಿರೆ: ಮಕ್ಕಳ ಯೋಗ ತರಬೇತಿ ಶಿಬಿರವನ್ನು ಏ. 4,5 ಮತ್ತು 6 ರಂದು ಎಸ್ ಡಿ ಎಂ ಪ್ರಕೃತಿ ಮತ್ತು ಯೋಗ ಕಾಲೇಜು ಉಜಿರೆ ಅಲ್ಲಿ ಏರ್ಪಡಿಸಲಾಗಿತ್ತು. ಮೂರು ದಿನದ ಶಿಬಿರದಲ್ಲಿ ಸುಮಾರು 112 ವಿದ್ಯಾರ್ಥಿಗಳು, 20 ಶಾಲೆಗಳಿಂದ ಭಾಗವಹಿಸಿದ್ದರು.

ಮೂರು ದಿನಗಳಲ್ಲಿ ಮಕ್ಕಳಿಗೆ ಯೋಗಾಸನ, ಪ್ರಾಣಯಾಮ, ದ್ಯಾನವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಹೇಳಿ ಕೊಡಿಸಲಾಗಿತ್ತು. ಮಕ್ಕಳಲ್ಲಿ ಸುಪ್ತವಾಗಿರುವ ದಿವ್ಯಶಕ್ತಿಯನ್ನು ಜಾಗೃತಗೊಳಿಸಲು ಯೋಗ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಮೂರುದಿನಗಳ ಕಾಲ ಮಕ್ಕಳಿಗೆ ದೈಹಿಕಾವಾಗಿಯೂ ಮತ್ತು ಮಾನಸಿಕವಾಗಿಯೂ ಸಹಾಯವಾಗುವಂತೆ ಅನೇಕ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಮೂರು ದಿನಗಳಲ್ಲಿ ವಿವಿಧ ಹಣ್ಣಿನ ರಸವನ್ನು ಮತ್ತು ತರಕಾರಿ ಮತ್ತು ಹಣ್ಣಿನ ಸಲಾಡ್ ಮಾಡಿ ಮಕ್ಕಳಿಗೆ ಕೊಡಲಾಯಿತು ಮತ್ತು ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸಲಾಗಿದೆ. ಎಲ್ಲ ಮಕ್ಕಳು ಬೇಸಿಗೆಯ ಶಿಬಿರವನ್ನು ಚೆನ್ನಾಗಿ ಬಳಸಿಕೊಂಡರು ಎಂದು ಎಸ್ ಡಿ ಎಂ ಪ್ರಕೃತಿ ಮತ್ತು ಯೋಗ ಕಾಲೇಜಿನ, ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಅವರು ಎ.6 ರಂದು ನಡೆದ ಮೂರು ದಿನದ ತರಬೇತಿಯ ವರದಿಯನ್ನು ತಿಳಿಸಿದರು.

ಪೌಷ್ಟಿಕ ಆಹಾರದಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿಯನ್ನು ಮತ್ತು ಎಣ್ಣೆಯಲ್ಲಿ ಮಾಡಿದ ಮತ್ತು ಬೇಕರಿಯಲ್ಲಿ ಸಿಗುವ ಆಹಾರ ಪದಾರ್ಥಗಳಿಂದ ಆಗುವ ದುಷ್ಪರಿಣಾಮಗಳನ್ನು ಮಕ್ಕಳಿಗೆ ಆಹಾರ ವೈದ್ಯ ತಜ್ಞರಾದ ಡಾ. ಗೀತಾ ಶೆಟ್ಟಿ ಅವರು ಮಕ್ಕಳಿಗೆ ತಿಳಿಸಿದ್ದರು.

ಓಂ ಮಂತ್ರದ ಮಹತ್ವದ ಬಗ್ಗೇ ಮಕ್ಕಳಲ್ಲಿ ಅರಿವನ್ನು ಮೂಡಿಸುವ ಮೂಲಕ ಅವರಿಗೆ ನಾದನುಸಂದನದ ಅಭ್ಯಾಸವನ್ನು ಮಾಡಿಸುವ ಮೂಲಕ ಮಕ್ಕಳಲ್ಲಿ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಶಕ್ತಿಯನ್ನೂ ಹೆಚ್ಚುವಂತೆ ಪ್ರಕೃತಿ ಚಿಕಿತ್ಸಾ ಡಿಪಾರ್ಟ್ಮೆಂಟನ ತಜ್ಞರಾದ ಡಾ ಸುಜಾತ ಮಾಡಿದರು.

ಕೊನೆಯ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಅಶೋಕ್ ಕುಮಾರ್ ಟಿ. ಎಸ್ ಡಿ ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅವರು ಯೋಗ ತರಬೇತಿ ಶಿಬಿರವನ್ನು ಕುರಿತು ಮಾತನಾಡಿದರು. ಅವರ ಬಾಲ್ಯದ ನೆನಪನ್ನು ಮೆಲುಕು ಹಾಕುತ್ತಾ, ಈಗಿನ ಕಾಲದ ಮಕ್ಕಳಲ್ಲಿ ಯೋಗ ಆಸನ, ಪ್ರಾಣಯಾಮದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ದಿವ್ಯಶಕ್ತಿಯನ್ನು ಜಾಗೃತಗೊಳಿಸಲು ಯೋಗದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

ಬ್ರಹ್ಮ ಮುಹೂರ್ತದಲ್ಲಿ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಹುದು ಮತ್ತು ಮಕ್ಕಳ ಬುದ್ಧಿ ಶಕ್ತಿಯನ್ನು ಚುರುಕು ಮಾಡಬಹುದು ಎಂಬ ಮಂತ್ರವನ್ನು ಎಲ್ಲ ಮಕ್ಕಳಿಗು ಮತ್ತು ಕಾರ್ಯಕ್ರಮದಲ್ಲಿ ನೆರೆದಿದ್ದ ಮಕ್ಕಳ ಪೋಷಕರಿಗೆ ಮನಕ್ಕೆ ತಟ್ಟುವಂತೆ ಡಾ ಪ್ರಶಾಂತ್ ಶೆಟ್ಟಿ ಅವರು ತಿಳಿಸಿದರು. ಯೋಗವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಶುಚಿತ್ವದ ಮಹತ್ವದ ಬಗ್ಗೇ ಮಕ್ಕಳಿಗೆ ಮನದಟ್ಟಗುವಂತೆ ತಿಳಿಹೇಳಿದರು.
ಎಲ್ಲ ಮಕ್ಕಳಿಗೂ ತರಬೇತಿ ಶಿಬಿರದ ಪ್ರಶಸ್ತಿ ಪತ್ರವನ್ನು ಡಾ. ಅಶೋಕ್ ಕುಮಾರ್ ಟಿ. ಮತ್ತು ಡಾ ಪ್ರಶಾಂತ್ ಶೆಟ್ಟಿ ಅವರು ನೀಡಿದರು.
ಕಾರ್ಯಕ್ರಮದ ಡಾ ಸುಜಾತ ವಂದಿಸಿದರು.

Related posts

ಉಜಿರೆ: ಅಮೃತ್ ಸಿಲ್ಕ್ಸ್ ರೆಡಿಮೇಡ್ಸ್ & ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ವಿಜಯೋತ್ಸವ’: ರೂ.2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕೀ ಡ್ರಾ ಕೂಪನ್

Suddi Udaya

ಸಾಮಾಜಿಕ ಕ್ಷೇತ್ರದ ಧುರೀಣ ಈಶ್ವರ ಭಟ್ ಕಾಂತಾಜೆ ನಿಧನ

Suddi Udaya

ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವರ್ಗಾವಣೆ

Suddi Udaya

ಬಂದಾರು: ಬೊಳೋಡಿ ಸೇತುವೆ ಬಳಿ ಧರೆ ಕುಸಿತ

Suddi Udaya

ರೆಖ್ಯ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: 6 ಮಂದಿಗೆ ಗಂಭೀರ ಗಾಯ

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!