24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶುಶ್ರೂಷ ಮಾಹಿತಿ ಕಾರ್ಯಾಗಾರ: ಜೆಸಿಐ ಪದಾಧಿಕಾರಿಗಳೊಂದಿಗೆ ಕುಟುಂಭೋತ್ಸವ ಆಚರಣೆ, ಬಹುಮಾನ ವಿತರಣೆ

ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ” ಶುಶ್ರೂಷ ” ಎಂಬ ಕಾರ್ಯಕ್ರಮವನ್ನು ಬೀಟ್ ರಾಕರ್ಸ್ ಡಾನ್ಸ್ ಆಕಾಡೆಮಿಯ ಮಾಲಕರಾದ ಜಿತೇಶ್ ಇವರ ನಿವಾಸದಲ್ಲಿ ಹಮ್ಮಿಕೊಳ್ಳಲಾಯಿತು.

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದುಗಳು, ಹಾಗೂ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡುವ ಬಗ್ಗೆ ವಲಯ ತರಬೇತಿದಾರರು ಹಾಗೂ ಬೆಳ್ತಂಗಡಿಯ ಶುಶ್ರೂಷನಾಧಿಕಾರಿ ಶುಭಾಷಿಣಿ ಇವರು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಜೆಸಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ವಹಿಸಿದ್ದರು.

ವೇದಿಕೆಯಲ್ಲಿ ಜಿತೇಶ್ ರವರ ಮಾತೃಶ್ರೀ ರೇವತಿ ಅತಿಥಿಯಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಜೂನಿಯರ್ ಘಟಕದ ನಿರ್ದೇಶಕರಾಗಿರುವ ರಕ್ಷಿತಾ ಶೆಟ್ಟಿ ಹಾಗೂ ಜೆಸಿವಾಣಿಯನ್ನು ಸ್ವಾತಿ ಪ್ರೀತೇಶ್ ಉದ್ಘೋಷಿಸಿದರು.

ಕಾರ್ಯಕ್ರಮದಲ್ಲಿ ಜೆಸಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಕುಟುಂಬೋತ್ಸವವನ್ನು ಆಚರಿಸಲಾಯಿತು. ಜೂನಿಯರ್ ಜೆಸಿ ವಿಭಾಗದ ನಿರ್ದೇಶಕರಾದ ಸಚಿನ್ ಸಾಲಿಯಾನ್ ಗೇರುಕಟ್ಟೆ ಇವರು ಕಾರ್ಯಕ್ರಮ ನಡೆಸಿಕೊಟ್ಟರು.

ಮಂಜುಶ್ರೀ ಜೆಸಿಐ ಘಟಕದಿಂದ ಕುಟುಂಬೋತ್ಸವವನ್ನು ಆಯೋಜಿಸಿದ ಜಿತೇಶ್ ಇವರ ಮಾತೃಶ್ರೀ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಅನುದೀಪ್ ಜೈನ್ ಇವರು ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶಂಕರ್ ರಾವ್, ಮಹಿಳಾ ಜೆಸಿ ಸಂಯೋಜಕರಾದ ಶ್ರುತಿರಂಜಿತ್, ಜೆಜೆಸಿ ಘಟಕದ ಅಧ್ಯಕ್ಷ ಸಮನ್ವತ್ ಕುಮಾರ್, ಘಟಕದ ಪೂರ್ವ ಅಧ್ಯಕ್ಷರು, ಮಹಿಳಾ ಜೆಸಿಯ ಪೂರ್ವ ಅಧ್ಯಕ್ಷರುಗಳು, ಘಟಕದ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಜೆಜೆಸಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಶಾಸಕ ಹರೀಶ್ ಪೂಂಜ ನೇಮಕ

Suddi Udaya

ಮರೋಡಿ: ಸಾರ್ವಜನಿಕ ಸೇವೆಗಾಗಿ ದಾನಿಗಳಿಂದ ₹ 8 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್‌ ವಾಹನ ಲೋಕಾರ್ಪಣೆ

Suddi Udaya

ಅರಸಿನಮಕ್ಕಿ: ವೀಸಾ ಕೊಡಿಸುವುದಾಗಿ ನಂಬಿಸಿ ರೂ. 2.50 ಲಕ್ಷ ವಂಚನೆ-ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಸುರೇಶ್ ಅವರಿಗೆ  ಬೀಳ್ಕೊಡುಗೆ

Suddi Udaya

ಬೆಂಗಳೂರು ಸೆಮಿಕಂಡಕ್ಟರ್ ವಿನ್ಯಾಸ ಸಂಸ್ಥೆ: 280 ಕೋಟಿ ರೂ. ಗೆ ಇನ್ಫೋಸಿಸ್ ಸ್ವಾಧೀನ

Suddi Udaya

ರಾಜ್ಯದ ರೈತರ, ಮಠ ಮಂದಿರಗಳ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲು ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲದ ವತಿಯಿಂದ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ

Suddi Udaya
error: Content is protected !!