25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ವೇಣೂರು: ಪಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿಗಳ ಸಹಿತ ಪಿಕಪ್‌ ವಾಹನ ವಶ

ವೇಣೂರು :ಇಲ್ಲಿಯ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ, ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ ವಾಹನಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಎ.7ರಂದು ವರದಿಯಾಗಿದೆ.

ಎ.07 ರಂದು ರಾತ್ರಿ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ, ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ‌ ಮೇರೆಗೆ, ಶ್ರೀಶೈಲ್‌ ಡಿ ಮುರಗೋಡ್‌ ಪಿ.ಎಸ್‌.ಐ ವೇಣೂರು ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ, ವೇಣೂರು ಡ್ಯಾಂ ಬಳಿ ಪಲ್ಗುಣಿ ನದಿಯಲ್ಲಿ, ಆಪಾದಿತರಾದ ಕರಿಮಣೇಲು ಗ್ರಾಮ, ಬೆಳ್ತಂಗಡಿ ನಿವಾಸಿ ಸತೀಶ್‌ (44) ಮತ್ತು ಮೂಡುಕೋಡಿ ಗ್ರಾಮ, ಬೆಳ್ತಂಗಡಿ ನವೀನ್‌ [35] ಎಂಬವರು, ನದಿಯಿಂದ ಮರಳು ತೆಗೆದು, ಕೆ ಎ 12 5150 ಹಾಗೂ ಕೆ ಎ 19 ಎಎ 4650ನೇ ಪಿಕಪ್‌ ಗಳಲ್ಲಿ ತಲಾ 30 ಬುಟ್ಟಿಗಳಷ್ಟು ಮರಳನ್ನು ತುಂಬಿಸಿರುವುದು ಕಂಡುಬಂದಿರುತ್ತದೆ.

ಆರೋಪಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಅನಧೀಕೃತವಾಗಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ, ವಾಹನಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು, ವೇಣೂರು ಠಾಣೆಯಲ್ಲಿ ಅಕ್ರ: 37/2024 ಕಲಂ: 379 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಪಟ್ರಮೆ ಸ್ಪಂದನ ಸಂಜೀವಿನಿ ಒಕ್ಕೂಟದ ಮಹಾಸಭೆ

Suddi Udaya

ಪಡ್ಡಂದಡ್ಕ ರಸ್ತೆ ದುರಸ್ಥಿ ಆಗ್ರಹಿಸಿ ಹೊಸಂಗಡಿ ಪಂಚಾಯತ್‌ಗೆ ಎಸ್‌ಡಿಪಿಐ ನಿಂದ ಮನವಿ

Suddi Udaya

ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬೆಲೆ ಏರಿಕೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ: ಮಲ್ಲೇಶ್ವರದಿಂದ ಬಂದ ಪುಡಾರಿಯಿಂದ ದ್ವೇಷದ ರಾಜಕಾರಣ: ಹರೀಶ್ ಪೂಂಜ ಆರೋಪ

Suddi Udaya

ಉಜಿರೆ : ಶ್ರೀ ಧ.ಮಂ. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗೆ ಬೀಳ್ಕೊಡುಗೆ

Suddi Udaya

ಬಾಂಜರು ಮಲೆ ಶೇ. 100 ಮತದಾನ, ಮತದಾರರಿಗೆ ಶಾಸಕ ಹರೀಶ್ ಪೂಂಜ ಅಭಿನಂದನೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಕೊಯ್ಯೂರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!