ಉಜಿರೆ: ಪೋಷಕರು ಹೆಣ್ಣು ಮಕ್ಕಳನ್ನು ಶಾಲೆ ಕಳುಹಿಸಿಕೊಡುವುದರ ಮೂಲಕ ವಿದ್ಯಾಭ್ಯಾಸ ನೀಡಬೇಕು, ಈ ನಿಟ್ಟಿನಲ್ಲಿ ಇತೀಚೆಗೆ ಉತ್ತಮ ಬೆಳವಣಿಗೆ ಕಾಣುತ್ತಿದೆ. ಪ್ರತಿ ಮಹಿಳೆಗೂ ಆತ್ಮ ಅಭಿಮಾನ ಇರುತ್ತದೆ. ಅದಕ್ಕಾಗಿ ತನ್ನದೇ ಆದ ಸಂಪಾದನೆ ಇರಬೇಕು ಇದಕ್ಕೆ ಮಹಿಳೆಯರಿಗೆ ಉದ್ಯೋಗದ ಕೌಶಲ್ಯವನ್ನು ಕಳುಹಿಸಿಕೊಟ್ಟರೆ ಅವರು ಯೌವನದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸಿ, ಮುಪ್ಪಿನಲ್ಲಿ ಸುಖಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಮಹಿಳೆಯರು ಸಿಮೀತ ವಿಷಯಕ್ಕೆ ಮಾತ್ರ ಅಂಟಿಕೊಳ್ಳದೆ ಅವಕಾಶಗಳನ್ನು ಬಳಸಿಕೊಳ್ಳಬೇಕು.
ಮನುಷ್ಯನ ಜೀವನದಲ್ಲಿ ಕಲಿಕೆ ನಿರಂತರವಾಗಿ ಇರಬೇಕು ರುಡ್‌ಸೆಟ್ ನಲ್ಲಿ ಏನು ಕಲಿಯುತ್ತೇವೆ ಅದನ್ನು ಮತ್ತೆ ನಮ್ಮ ಆಸಕ್ತಿಯಿಂದ ಮುಂದುವರಿಸಿಕೊಂಡು ಹೋಗಬೇಕು. ಮಹಿಳೆಯರು ಯಾವುದದಾರೂ ಒಂದು ವಿಷಯದಲ್ಲಿ ತಜ್ಞೆತೆಯನ್ನು ಹೊಂದಬೇಕು ಹಾಗೂ ನಿಮ್ಮಲ್ಲಿ ಬರುವ ಗ್ರಾಹಕರಿಗೆ ಒಂದೊಂದು ಹೊಸ ಟಿಪ್ಸ್ ಅಥವಾ ಸಲಹೆಗಳನ್ನು ನೀಡಬೇಕು. ಜೊತೆಗೆ ಸಮಯ ಪಾಲನೆ ಮಾಡಬೇಕು. ರುಡ್‌ಸೆಟ್ ಸಂಸ್ಥೆಯಲ್ಲಿ ಮಾತ್ರ ವ್ಯವಹಾರದ ಗುಟ್ಟನ್ನು ತಿಳಿಸಿಕೊಡುತ್ತಾರೆ. ಆ ಮೂಲಕ ಮಹಿಳೆಯರು ಲೆಕ್ಕಚಾರ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ. ಬಲಿಷ್ಠ ವ್ಯಕ್ತಿ ಯಾರು ಎಂದರೆ ತನ್ನ ಕಾಲಲ್ಲಿ ನಿಂತವರು ಅವರು ದೇಶದ ಅತ್ಯಂತ ಬಲಿಷ್ಠ ವ್ಯಕ್ತಿ ಆಗುತ್ತಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಡಾ. ಹೇಮಾವತಿ. ವಿ. ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಮಹಿಳಾ ಬ್ಯೂಟೀಪಾರ್ಲರ್ ಮತ್ತು 06 ದಿನ ಗಳ ಕಾಲ ನಡೆದ ಮದುಮಗಳ ಶೃಂಗಾರ -ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರರವರು ಅಧ್ಯಕ್ಷತೆ ವಹಿಸಿದ್ದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್ ರವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿಯ ಹಿನ್ನೋಟವನ್ನು ನೀಡಿದರು. ತರಬೇತಿಯ ಅತಿಥಿ ಉಪನ್ಯಾಸಕಿಯಾದ ಶ್ರೀಮತಿ ಮಾಧವಿ ರೈ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಜಿ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಅವರು ವಂದಿಸಿದರು. ತರಬೇತಿಯಲ್ಲಿ ಒಟ್ಟು 70 ಜನ ಅಭ್ಯರ್ಥಿಗಳನ್ನು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.