28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.10: ಧರ್ಮಸ್ಥಳ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಮತ್ತು ಪ್ರಥಮ ವರ್ಷದ ಸಂಭ್ರಮ

ಧರ್ಮಸ್ಥಳ: ಇಲ್ಲಿಯ ಜೋಡುಸ್ಥಾನ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಪ್ರಥಮ ವರ್ಷದ ಸಂಭ್ರಮವು ಎ.10 ರಂದು ಸಂಜೆ 5.45 ರಿಂದ ರಾತ್ರಿ 9.00 ರವರೆಗೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಂಗಳೂರು ಕದ್ರಿ ನೃತ್ಯ ಭಾರತಿ ಕಲಾಶ್ರೀ ಗುರು ಶ್ರೀಮತಿ ಗೀತಾ ಸರಳಾಯ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್, ಮಂಗಳೂರು ಕದ್ರಿ ನೃತ್ಯ ಭಾರತಿ ವಿದುಷಿ ರಶ್ಮಿ ಚಿದಾನಂದ್ ಭಾಗವಹಿಸಲಿದ್ದಾರೆ.

ಉಜಿರೆ ವಾಣಿಶ್ರೀ ನೃತ್ಯ ಕೇಂದ್ರದ ಶ್ರೀಮತಿ ಶಾಂತ ಪಡುವೆಟ್ನಾಯ ರಿಗೆ ನೃತ್ಯ ದೀಪ ಪ್ರಶಸ್ತಿ ಪ್ರದಾನ ನಡೆಯಲಿದೆಯೆಂದು ಅದ್ಯಕ್ಷೆ ವಿದುಷಿ ಕು.ಚೈತ್ರಾ ಎಮ್,ಉಪಾಧ್ಯಕ್ಷೆ ಮೀನಾಕ್ಷಿ ಜಿ ಭಟ್,ಗೌರವ ಸಲಹೆಗಾರ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿದ್ದಾರೆ.

Related posts

ಉಜಿರೆ : ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧಿಕಾರ ಸ್ವೀಕಾರ

Suddi Udaya

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!