25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಎಂ.ಎಸ್. ಪ್ರಕಾಶ್ ಎಂಬವರ ತೋಟಕ್ಕೆ ಎ.6ರಂದು ತಡರಾತ್ರಿ ಒಂಟಿ ಸಲಗ ಪ್ರವೇಶಿಸಿ ಕೃಷಿಹಾನಿ ಉಂಟುಮಾಡಿದೆ.


ಸಲಗವು ಸುಮಾರು 40ಕ್ಕಿಂತ ಅಧಿಕ ಬಾಳೆ ಗಿಡ 5 ಅಡಕೆ ಮರಗಳನ್ನು ಧ್ವಂಸಗೊಳಿಸಿದೆ.
ಕಳೆದ ಸುಮಾರು ಎರಡು ತಿಂಗಳ ಹಿಂದೆ ಇದೇ ತೋಟಕ್ಕೆ ಪ್ರವೇಶಿಸಿದ್ದ ಕಾಡಾನೆ ಆಗ ಈಚಲ ಮರವನ್ನು ಮುರಿದು ಹಾಕಿತ್ತು. ಮನೆಯವರು ಅದನ್ನು ಹಾಗೆ ಬಿಟ್ಟಿದ್ದರು. ಈ ಈಚಲ ಮರವನ್ನು ಆನೆ ಶನಿವಾರ ಸಂಪೂರ್ಣ ಪುಡಿಗಟ್ಟಿದೆ.
ತಿಂಗಳ ಹಿಂದೆ ಕಾಡಾನೆಗಳು ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಕಲ್ಮಂಜ,ಬೆಳಾಲು, ಗೇರುಕಟ್ಟೆ ಮೊದಲಾದ ಕಡೆ ಸಾಕಷ್ಟು ದಾಂಧಲೆ ನಡೆಸಿ ಉಪ್ಪಿನಂಗಡಿ ಭಾಗದಲ್ಲಿಯು ಪ್ರತ್ಯಕ್ಷವಾಗಿದ್ದು, ಇದೀಗ ಮತ್ತೆ ಕಾಡಾನೆ ಉಪಟಳ ಈ ಭಾಗಗಳಲ್ಲಿ ಕಾಣಿಸಿಕೊಂಡಿದೆ.

Related posts

ಕಾಶಿಪಟ್ಣ ಗ್ರಾ.ಪಂ.ನಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಅಭಿವಂದನಾ ಕಾರ್ಯಕ್ರಮ: ಚಲನಚಿತ್ರ ನಟ ವಿಜಯ ರಾಘವೇಂದ್ರ ಭಾಗಿ

Suddi Udaya

ಬೆನಕ ಆಸ್ಪತ್ರೆಯಿಂದ ಡಾ| ಕೇಶವ ರವರಿಗೆ ಗೌರವಾರ್ಪಣೆ

Suddi Udaya

ಅರಸಿನಮಕ್ಕಿ: ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

Suddi Udaya

ಪಾಲ್ತಾಡಿ ರಾಮಕೃಷ್ಣ ಆಚಾರ್ಯ ರವರ ನಿಧನಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಪುಂಜಾಲಕಟ್ಟೆ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!