ಬಳಂಜ: ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೋತ್ಸವ ಸಂದರ್ಭದಲ್ಲಿ ಮೈಸೂರು ಶ್ರೀಮತಿ ಶ್ರೀದೇವಿ ಮತ್ತು ಬಾಲಕೃಷ್ಣ ಭಟ್ ಮತ್ತು ಕುಟುಂಬಿಕರು ಶ್ರೀ ದೇವರಿಗೆ ನೂತನ ಪಲ್ಲಕ್ಕಿಯನ್ನು ಸಮರ್ಪಿಸಿದರು.
ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಮಕ್ಕಳಿಂದ ಕುಣಿತಾ ಭಜನೆ, ಪಂಚಶ್ರೀ ಮಹಿಳಾ ಭಜನಾ ತಂಡದಿಂದ ಭಜನೆ ಹಾಗೂ ವಿವಿಧ ವೇಷ ಭೂಷಣಗಳಿಂದ ಪಲ್ಲಕ್ಕಿಯ ಭವ್ಯ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ ಶೀತಲ್ ಪಡಿವಾಲ್, ಹಿರಿಯರಾದ ಹೆಚ್.ಧರ್ಣಪ್ಪ ಪೂಜಾರಿ,ದೇವಸ್ಥಾನದ ಜಿರ್ಣೋದ್ಧಾರ ಸಮಿತಿ ಅದ್ಯಕ್ಷ ಸತೀಶ್ ರೈ ಬಾರ್ದಡ್ಕ, ಕೃಷಿಕ
ತಿಮ್ಮಪ್ಪ ಪೂಜಾರಿ ನಾಲ್ಕೂರು, ಅಳದಂಗಡಿ ಸಿಎ ಬ್ಯಾಂಕ್ ನಿರ್ದೆಶಕ ವಿಶ್ವನಾಥ ಹೊಳ್ಳ, ಗುರುಪ್ರಸಾದ್ ಹೆಗ್ಡೆ, ಹೆಚ್.ದೇಜಪ್ಪ ಪೂಜಾರಿ,ದಿನೇಶ್ ಪಿ.ಕೆ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್,ಬಳಂಜ ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಉಪಾಧ್ಯಕ್ಷ ಯಶೋಧರ ಶೆಟ್ಟಿ ,ಗಣೇಶ್ ಪೂಜಾರಿ ಬೊಂಟ್ರೋಟ್ಟುಗುತ್ತು,
ಪ್ರಮುಖರಾದ ಪ್ರವೀಣ್ ಕುಮಾರ್ ಹೆಚ್.ಎಸ್, ಸುರೇಶ್ ಪೂಜಾರಿ ಜೈಮಾತ, ಸದಾನಂದ ಸಾಲಿಯಾನ್, ಗಣೇಶ್ ದೇವಾಡಿಗ,ರವೀಂದ್ರ ಬಿ ಅಮಿನ್, ಸಂತೋಷ್ ಕುಮಾರ್ ಜೈನ್, ಸುರೇಶ್ ಶೆಟ್ಟಿ ಕುರೆಲ್ಯ,ದಿನೇಶ್ ಪೂಜಾರಿ ಅಂತರ, ರಮಾನಾಥ ರೈ,ಸುರೇಶ್ ಪೂಜಾರಿ ಹೇವ, ಜಗದೀಶ್ ಪೂಜಾರಿ ಪೆರಾಜೆ,ಪ್ರವೀಣ್ ಲಾಂತ್ಯಾರು, ಪುರಂದರ ಪೂಜಾರಿ ಪೆರಾಜೆ,ರಾಘವೇಂದ್ರ ಭಟ್, ಹರೀಶ್ ರೈ,ಸಂಜೀವ ಶೆಟ್ಟಿ ನಾಲ್ಕೂರು, ರಜತ್ ಹೆಗ್ಡೆ, ಸತೀಶ್ ಕೆ,ಗಣೇಶ್ ಸುರ್ಯ, ಹಾಗೂ ಭಕ್ತರು ಉಪಸ್ಥಿತರಿದ್ದರು..