24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಧರ್ಮಸ್ಥಳದಲ್ಲಿ ಗೀತ ನೃತ್ಯಾಲಯ ವಾರ್ಷಿಕೋತ್ಸವ

ಧರ್ಮಸ್ಥಳ: ಒತ್ತಡಮುಕ್ತ ಜೀವನಕ್ಕೆ ಸಂಗೀತ ಮತ್ತು ನೃತ್ಯ ಕಲೆ ಪೂರಕ ಹಾಗೂ ಪ್ರೇರಕವಾಗಿದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.


ಅವರು ಎ.10 ರಂದು ಧರ್ಮಸ್ಥಳದಲ್ಲಿ “ಮಹೋತ್ಸವ” ಸಭಾಭವನದಲ್ಲಿ ಧರ್ಮಸ್ಥಳದ ಜೋಡುಸ್ಥಾನದಲ್ಲಿರುವ ಗೀತನೃತ್ಯಾಲಯದ ನೃತ್ಯೋತ್ಸವ ಮತ್ತು ಗುರುವಂದನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕೇವಲ ಸಂಪಾದನೆಗಾಗಿ ಯಾವುದೇ ವಿದ್ಯೆ ಮತ್ತು ಕಲೆಯನ್ನು ಕಲಿಯಬಾರದು. ಇಂದಿನ ಒತ್ತಡದ ಬದುಕಿನಲ್ಲಿ ಒತ್ತಡಮುಕ್ತ ಜೀವನ ಮಾಡಲು ಬಾಲ್ಯದಲ್ಲೆ ಸಂಗೀತ, ಭರತನಾಟ್ಯ ಮೊದಲಾದ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನೃತ್ಯ ನೋಡಿ ಆನಂದಿಸಲು ಸುಲಭ. ಆದರೆ ಕಲಿಯಲು ಕಷ್ಟ. ಭರತನಾಟ್ಯದ ಮೂಲಗುರು ಭರತಮುನಿಗಳಾಗಿದ್ದು, ಭರತನಾಟ್ಯ ವಿಶ್ವಮಾನ್ಯತೆ ಪಡೆದಿದೆ. ನೃತ್ಯ ಮಾಡುವಾಗ ಭಾವಾಭಿನಯದಿಂದ ಹಾಡನ್ನು ಅನುಭವಿಸಿಕೊಂಡು ನಾಟ್ಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.


ಟಿ.ವಿ., ಮೊಬೈಲ್‌ಫೋನ್‌ನಿಂದ ದೂರವಿದ್ದು ಸಂಗೀತ, ನೃತ್ಯ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಸಾರ್ಥಕ ಜೀವನ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.


ಮಂಗಳೂರಿನ ಕದ್ರಿ ನೃತ್ಯ ಭಾರತಿಯ ಗೀತಾ ಸರಳಾಯ ಸಮಾರಂಭ ಉದ್ಘಾಟಿಸಿದರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡಿದರು. ವಿದುಷಿ ಕುಮಾರಿ ಚೈತ್ರಾ ತನ್ನ ಗುರುಗಳಾದ ಉಜಿರೆಯ ಶಾಂತ ಪಡ್ವೆಟ್ನಾಯರಿಗೆ “ನೃತ್ಯದೀಪ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.


ಗೀತನೃತ್ಯಾಲಯದ ೩೮ ಮಂದಿ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.
ವಿದುಷಿ ಕುಮಾರಿ ಚೈತ್ರಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಛತ್ರದ ಪ್ರಬಂಧಕರಾದ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಶಶಿಕಲ ಧನ್ಯವಾದವಿತ್ತರು. ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.

Related posts

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ: ದೇವರಿಗೆ ಪಂಚಾಮೃತ ಅಭಿಷೇಕ

Suddi Udaya

ಸುಲ್ಕೇರಿಮೊಗ್ರು: ಬಾಣಂತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ಮನೋಜ್ ಕಟ್ಟೆಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

Suddi Udaya

ಜಿಲ್ಲಾ ಮಟ್ಟದ ಇನ್ಸ್ ಪೈಯರ್ ಸ್ಪರ್ಧೆಗೆ ಉರುವಾಲು ಶ್ರೀ ಭಾರತೀ ವಿದ್ಯಾರ್ಥಿಗಳು ಆಯ್ಕೆ

Suddi Udaya

ಕುತ್ಲೂರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದಲ್ಲಿ ಯಂತ್ರಶ್ರೀ ಮಾಹಿತಿ ಕಾರ್ಯಾಗಾರ

Suddi Udaya

ಶ್ರೀ ಧ.ಮಂ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಭಾರತೀಯ ಆಯುರ್ವಿಜ್ಞಾನ ಸಂಪದ ಸಂಸ್ಥಾನ, ಹೈದರಾಬಾದ್ ನಡುವೆ ಹಸ್ತಪ್ರತಿಗಳ ಸಂಶೋಧನೆ ಕುರಿತು ಒಡಂಬಡಿಕೆ ಪತ್ರ ಹಸ್ತಾಂತರ

Suddi Udaya
error: Content is protected !!