ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಶೇ 100 ಮತದಾನಕ್ಕಾಗಿ ಚುನಾವಣೆಗೆ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗದ ಸೂಚನೆಯಂತೆ ಬೆಳ್ತಂಗಡಿ ತಾಲೂಕಿನಲ್ಲಿ ಸ್ವೀಪ್ ಸಮಿತಿಯ ಅಧಿಕಾರಿ ಹಾಗೂ ತಾ.ಪಂ ಕಾಯ೯ನಿವಾ೯ಹಣಾಧಿಕಾರಿ ವೈಜಣ್ಣ ಹಾಗೂ ಸಿಬ್ಬಂದಿಗಳು
ಹರಸಾಹಸ ನಡೆಸುತ್ತಿದ್ದಾರೆ.
ಬಾರಿ ಶೇ.100 ಮತದಾನದ ಗುರಿಯನ್ನು ಇಟ್ಟುಕೊಂಡು ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿಯು ಸರಕಾರಿ, ಅರೆಸರ್ಕಾರಿ, ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಪೋಸ್ಟರ್ ಅಭಿಯಾನ, ಮತದಾನ ಜಾಗೃತಿ ಕಾರ್ಯಕ್ರಮ ವಿವಿದೆಡೆ ನಡೆಸುತ್ತಿದೆ.
ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ಶಿಶಿಲ ಶಿಶಿಲೇಶ್ವರ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಬೆಳ್ತಂಗಡಿ ಬಸ್ ನಿಲ್ದಾಣಗಳಲ್ಲಿ ಭಕ್ತರ ಹಾಗೂ ಪ್ರವಾಸಿಗರಲ್ಲಿ ಮತದಾನ ಜಾಗೃತಿಗಾಗಿ ಸೆಲ್ಪಿ ಪಾಯಿಂಟ್ ಅಳವಡಿಸಲಾಗುತ್ತದೆ. ‘ನಾನು ಮತದಾನ ಮಾಡುವೆ ನೀವು ಮಾಡಿ’ ಎಂದು ಮತದಾರರಿಗೆ ಸಂದೇಶ ಸಾರುವುದು ಸೆಲ್ಪಿ ಪಾಯಿಂಟ್‌ನ ಉದ್ದೇಶವಾಗಿದೆ.
ಸ್ವೀಪ್ ಸಮಿತಿಯ ವೈಜಯಣ್ಣ ಸೇರಿದಂತೆ ತಾಲೂಕು ಪಂಚಾಯತನ ಎಲ್ಲಾ ಸಿಬ್ಬಂದಿಗಳು ಈ ಸೆಲ್ಪಿ ಪಾಯಿಂಟ್ ನಲ್ಲಿ ಸಂಭ್ರಮಿಸಿದರು.