25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮದ್ದಡ್ಕ ಮಸೀದಿ ಬಳಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕುವೆಟ್ಟು : ಇಲ್ಲಿಯ ಮದ್ದಡ್ಕ ಮಸೀದಿ ಬಳಿ ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಎ.10ರಂದು ನಡೆದಿದೆ.

ಕುವೆಟ್ಟು ನಿವಾಸಿ ಮಹಮ್ಮದ್‌ (63) ಎಂಬವರ ದೂರಿನಂತೆ, ಎ.10 ರಂದು ಸಂಜೆ, ಮಹಮ್ಮದ್ ರವರ ಬಾಬ್ತು KA 70-5972 ನೇ ಆಟೋ ರಿಕ್ಷಾದಲ್ಲಿ ಸಹ ಪ್ರಯಾಣಿಕರನ್ನಾಗಿ, ಸಲೀಂ ಹಾಗೂ ಅವರ ಮಕ್ಕಳಾದ ಮೊಹಮ್ಮದ್‌ ಶಯಾನ್‌(8), ರಿಫ್ನಾ (6) ಎಂಬವರನ್ನು ಕುಳ್ಳಿರಿಸಿಕೊಂಡು, ಮದ್ದಡ್ಕ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ, ಕುವೆಟ್ಟು ಗ್ರಾಮದ ಮದ್ದಡ್ಕ ಮಸೀದಿ ಬಳಿ ತಲುಪುತ್ತಿದ್ದಂತೆ, ಮಹಮ್ಮದ್ ವಿರುದ್ದ ದಿಕ್ಕಿನಿಂದ KA 18 Z 3143 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ, ಮಹಮ್ಮದ್ ರವರ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂಗೊಂಡು ಮಹಮ್ಮದ್, ಸಲೀಂರವರಿಗೆ, ಮಗು ಮೊಹಮ್ಮದ್‌ ಶಯಾನ್‌ ರವರುಗಳಿಗೆ ಗಾಯಗಳಾಗಿರುತ್ತದೆ.

ಗಾಯಾಳುಗಳು ಗುರುವಾಯನಕೆರೆ ಆಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿ, ಈ ಪೈಕಿ ಗಾಯಾಳು ಮೊಹಮ್ಮದ್‌ ಶಯಾನ್‌ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 42/2024 ಕಲಂ: 279,337 ಭಾ.ದಂ.ಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ನೆರಿಯ: ಸಂಜೀವ ಗೌಡ ನಿಧನ

Suddi Udaya

ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ , ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ಆಯ್ಕೆ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ

Suddi Udaya

ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಹಳೆಯ ಆಡಳಿತ ಮಂಡಳಿ ರದ್ದು, ನೂತನ ವಿಶೇಷಾಧಿಕಾರಿಯಾಗಿ ಯಮುನ ನೇಮಕ

Suddi Udaya

ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya
error: Content is protected !!