July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಾಮಾಜಿಕ ಜಾಲತಾಣಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ರಿಂದ ಬೆಳ್ತಂಗಡಿ ಠಾಣೆಗೆ ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಕಾಂಗ್ರೇಸ್ ಪಕ್ಷದ ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಎ.10 ರಂದು ದೂರು ನೀಡಿದ್ದಾರೆ,

ಕಾಂಗ್ರೇಸ್ ಪಕ್ಷದ ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ನೀಡಿದ ದೂರಿನಲ್ಲಿ ಆರೋಪಿಗಳಾದ ವಸಂತ್ ಗಿಳಿಯಾರ್, ಜಯಂತ್ ಮತ್ತೀತರರು ಸಾಮಾಜಿಕ ಜಾಲಾತಾಣದಲ್ಲಿ ” ಹಿಂದೂಗಳ ಅಗತ್ಯ ನಮಗೆ ಬೇಡ .ಮುಸ್ಲಿಂ ರ ಓಟು ಸಾಕು : ಸಿದ್ದರಾಮಯ್ಯ ‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ ಮುಸ್ಲಿಂ ರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ‘ಎಂಬ ತಲೆಬರಹದಡಿ ಸುಳ್ಳು ಸುದ್ದಿಯನ್ನು ಹರ‍ಡಿದ್ದು ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯಂತೆ ಎಡಿಟ್ ಮಾಡಿ ಈ ಸುಳ್ಳು ಸುದ್ದಿಯನ್ನು ಹರಡಿದ್ದಾರೆ.
ಜಾತಿ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಿ ಸಮಾಜದಲ್ಲಿ ಶಾಂತಿಭಂಗ ಉಂಟುಮಾಡುವ ಸಮಾನ ಉದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ಎಡಿಟ್ ಮಾಡಿ ಬಿತ್ತರಿಸಲಾಗಿರುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರ್‍ಯ ಕ್ರಮದಲ್ಲಿ ಈ ರೀತಿ ಮಾತನಾಡಿರುವುದಿಲ್ಲ ಮತ್ತು ರಾಜ್ಯದ ಯಾವುದೇ ಪತ್ರಿಕಾ ಮಾಧ್ಯಮಾಗಳು ಇಂತಹ ವರದಿ ಮಾಡಿರುವುದಿಲ್ಲ ಹಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಾಯ್ಯನವರ ಘನತೆ ಗೌರವಕ್ಕೆ ಚ್ಯುತಿ ಬರುವಂತೆ ಹಾಗೂ ಧರ್ಮ ಧರ್ಮಗಳ ನಡುವೆ ವೈಸಮ್ಯ ಸೃಷ್ಟಿಸಿ ಸಮಾಜದಲ್ಲಿ ಶಾಂತಿಭಂಗ ಉಂಟುಮಾಡಿ ಸಮಾಜದಲ್ಲಿ ಚುಣಾವಣಾ ಸಂದರ್ಭದಲ್ಲಿ ಗಲಭೆ ಉಂಟುಮಾಡುವ ಹುನ್ನಾರದಿಂದ ಆರೋಪಿಗಳು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಾಡಿನ ಮತದಾರರನ್ನು ದಾರಿ ತಪ್ಪಿಸಲು ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಪಟ್ರಮೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ನಡ ಸರಕಾರಿ ಪ್ರೌಢಶಾಲೆ ಶಾಲಾ ಪ್ರಾರಂಭೋತ್ಸವ

Suddi Udaya

ಕರಂಬಾರು: ಬೂಟ್ಟೆಲ್ಮಾರ್ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ ಅಭಿವೃದ್ಧಿಗೆ ರೂ.1 ಲಕ್ಷ ಡಿ.ಡಿ. ವಿತರಣೆ

Suddi Udaya

ನಡ ಶತಮಾನೋತ್ಸವ ಸಮಿತಿಯಿಂದ ವಿ.ಪ. ಶಾಸಕ ಮಂಜುನಾಥ ಭಂಡಾರಿಯವರ ಭೇಟಿ

Suddi Udaya

ಮರೋಡಿ: ಹಾರೋದ್ದು ನಿವಾಸಿ ಗೀತಾ ನಿಧನ

Suddi Udaya
error: Content is protected !!