ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ

ಮರೋಡಿ: ಈ ನೆಲದ ಸಾತ್ವಿಕ ಶಕ್ತಿಯಿಂದ ಭಾರತ ಸಾಂಸ್ಕೃತಿಕವಾಗಿ ಜಗತ್ತಿಗೆ ಪರಿಚಯವಾದ ದೇಶ. ನಮ್ಮ‌ ಬದುಕು, ಧರ್ಮ ಈ ನೆಲದಲ್ಲಿ ಸಮಾವೇಶಗೊಂಡಿದೆ. ನಮ್ಮ‌ ಶ್ರದ್ದಾಕೇಂದ್ರಗಳು ಬದುಕಿಗೆ ಹಾಗೂ ಮನಸ್ಸಿಗೆ ಚೈತನ್ಯ ತುಂಬುವ ಶಕ್ತಿಕೇಂದ್ರಗಳು. ಭಗವಂತನ ಸೇವೆಗೆ ನಮ್ಮನ್ನು ನಾವು ಅರ್ಪಿಸಿಕೊಂಡಾಗ ಹಿಂದೂ ಸಮಾಜದ ಅರ್ಪನೆ, ತರ್ಪನೆ ಉಜ್ಜೀವನಗೊಳ್ಳುತ್ತದೆ ಎಂದು ಕುದ್ರೋಳಿ ಶ್ರೀ ಗೋಕರ್ನಾಥೇಶ್ವರ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು.

ಅವರು ಎ.9 ರಂದು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ‌ ಸಭೆಯಲ್ಲಿ ಉಪನ್ಯಾಸ ನೀಡಿದರು.

ನಮ್ಮ ಮಕ್ಕಳಿಗೆ ಈ ನೆಲದ ಶಕ್ತಿಯನ್ನು ತಿಳಿಸುವ ಕೆಲಸವನ್ನು ನಮ್ಮ ತಾಯಂದಿರು ಮಾಡಿದಾಗ ರಾಷ್ಟ್ರದೇವೋಭವದ ಕಲ್ಪನೆ ಮಕ್ಕಳಲ್ಲಿ ಮೊಳಕೆಯೊಡೆಯುತ್ತದೆ. ನಮ್ಮ ಮಕ್ಕಳನ್ನು ಧಾರ್ಮಿಕ ಉತ್ಸವಕ್ಕೆ ಕಲಿಸುವ ಸಂಕಲ್ಪ ನಾವು ಮಾಡುವ ಅನಿವಾರ್ಯತೆ ಇದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮರೋಡಿ‌ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ವಹಿಸಿ ದೈವ- ದೇವರ ಸಂಕಲ್ಪದಂತೆ ಮರೋಡಿ ಶ್ರೀ ಉಮಾಮಹೇಶ್ವರ ದೇವರ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಊರ ಪರವೂರ ಭಕ್ತರ ಸಹಕಾರದಿಂದ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು.

ವೇದಿಕೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಎಸ್.ಎಸ್,ಬೆಳ್ಳಿಬೀಡು ಶ್ರೀ ಪಾರ್ಶ್ವನಾಥ ಬಸದಿಯ ಅಡಳಿತ ಮೊಕ್ತೇಸರ ಹೇಮರಾಜ ಬೆಳ್ಳಿಬೀಡು,ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ,ಉದ್ಯಮಿ,ಪ್ರಗತಿಪರ ಕೃಷಿಕ ಕಿರಣ್ ಕುಮಾರ್ ಮಂಜಿಲ,ಮೂಡಬಿದ್ರೆ ಧನಲಕ್ಷ್ಮಿ ಕ್ಯಾಶು ಇಂಡಸ್ಟ್ರೀಸ್ ಮಾಲಕ ಶ್ರೀಪತಿ ಭಟ್,ಡಾ.ವಿಷ್ಣು ಕುಮಾರ ಹೆಗ್ಡೆ ಏಳಂಬ ಕೊಕ್ರಾಡಿ,ನವೀನ್ ಹೆಗ್ಡೆ ಮೂಡಬಿದ್ರೆ,ಮುಂಬಯಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ನಾರಾಯಣ ಸುವರ್ಣ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಗತಿಯ ಕೆಲಸ ಹಾಗೂ ಬ್ರಹ್ಮಕಲಶೋತ್ಸವ, ಜಿರ್ಣೋದ್ದೊರಕ್ಕೆ ಸಹಕರಿಸಿದ ಭಕ್ತ ಮಹಾಶಯರನ್ನು ಸನ್ಮಾನಿಸಲಾಯಿತು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ್ ಕೋಟ್ಯಾನ್ ಸ್ವಾಗತಿಸಿದರು.ಆಡಳಿತ ಮಂಡಳಿ ಸದಸ್ಯ ರತ್ನಾಕರ ಬುಣ್ಣನ್ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು.

Related posts

ಬಳಂಜ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರವೀಂದ್ರ ಶೆಟ್ಟಿ ರವರಿಗೆ “ಚುಟುಕು ಚಿನ್ಮಯಿ” ಗೌರವ ಪ್ರಶಸ್ತಿ

Suddi Udaya

ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕುತ್ಲೂರಿನ ನಿಷ್ಕ್ ಹರೀಶ್ ಸಾಲಿಯಾನ್‌ಗೆ ರಾಷ್ಟ್ರೀಯ ಬೆಳ್ಳಿ ಪದಕ

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಯಗಾರ

Suddi Udaya

ಶಿಶಿಲ ಸ.ಉ.ಹಿ.ಪ್ರಾ.ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!