23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಂತರಾಷ್ಟ್ರೀಯ ಆರೋಗ್ಯ ದಿನದ ಆಚರಣೆ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಅಂತರಾಷ್ಟ್ರೀಯ ಆರೋಗ್ಯ ದಿನದ ಪ್ರಯುಕ್ತ ರಕ್ತದಾನದ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆಯ ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಮೆಡಿಕಲ್ ಸೈನ್ಸ್ ವಿಭಾಗದ ಡೀನ್ ಡಾ| ಬಾಲಕೃಷ್ಣ ಶೆಟ್ಟಿ ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿದರು. ರಕ್ತದಾನದ ಮುಖಾಂತರ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಬಗ್ಗೆ ಹಾಗೂ ಮಧುಮೇಹವನ್ನು ತಡೆಗಟ್ಟುವ ಬಗ್ಗೆಯೂ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿಯವರು ವಹಿಸಿ, ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್, ಜೆ ಜೆ ಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್ ಉಪಸ್ಥಿತರಿದ್ದರು.

ವೇದಿಕೆ ಆಹ್ವಾನವನ್ನು ಉಪಾಧ್ಯಕ್ಷರಾದ ಶೈಲೇಶ್, ಜೆಸಿ ವಾಣಿಯನ್ನು ಜೊತೆ ಕಾರ್ಯದರ್ಶಿಗಳಾದ ಪ್ರಮೋದ್ ಕೆ ಹಾಗೂ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಸದಸ್ಯರಾದ ರಜತ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸದಸ್ಯರಾದ ಅನನ್ಯ ಜೈನ್ ಸಂಯೋಜಿಸಿದರು. ಕಾರ್ಯದರ್ಶಿಗಳಾದ ಅನುದೀಪ್ ಜೈನ್ ರವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

Related posts

ಬೆಳ್ತಂಗಡಿ ಜೆಪಿ ಅಟ್ಟಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಮೇಲಂತಬೆಟ್ಟು: ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

Suddi Udaya

ಪಡಂಗಡಿ : ಹೊನಲು ಬೆಳಕಿನ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದ ಆರೋಗ್ಯ ಮತ್ತು ಶುಚಿತ್ವ ಕಾರ್ಯಕ್ರಮ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya
error: Content is protected !!