ಉಜಿರೆ : ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಡಾ. ಬಿ .ಆರ್. ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎ ಲ್. ಇಡಿ) ಸಂಸ್ಥೆಯಲ್ಲಿ ಡಾ. ಬಿ .ಆರ್. ಅಂಬೇಡ್ಕರ್ ಜಯಂತಿಯನ್ನು ಎ. 14 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಕ್ಕಡದ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಹೆಚ್. ಪ್ರಭಾಕರ ನಾಯ್ಕ್ ಮಾತನಾಡುತ್ತಾ ಭಾರತದ ಸಂವಿಧಾನದ ಶಿಲ್ಪಿ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಇಡೀ ಬದುಕನ್ನು ಹೋರಾಟದ ಮೂಲಕ ಕಟ್ಟಿಕೊಂಡವರು. ಸಮಾಜದ ಖಿನ್ನತೆಗೆ ಒಳಗಾದ ವರ್ಗಗಳ ಉನ್ನತಿಗಾಗಿ ವಿವಿಧ ಸಾಮಾಜಿಕ ಚಳುವಳಿಗಳನ್ನು ಮುನ್ನಡೆಸಿದವರು. ಸಾಂವಿಧಾನಿಕ ಕಾನೂನು ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತಾದ ತಮ್ಮ ಪಾಂಡಿತ್ಯಪೂರ್ಣ ಕೃತಿಗಳ ಮೂಲಕ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಹಾಗಾಗಿ ನೀವೆಲ್ಲರು ವಿದ್ಯಾವಂತರಾಗಿ, ಸಂಘಟಿತರಾಗಿ, ದೇಶದ ಒಳಿತಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ ವಹಿಸಿ ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಜ್ಞಾನಿ, ಧೀಮಂತ ನಾಯಕ, ಶಿಕ್ಷಣ ತಜ್ಞ ಹಾಗೂ ನ್ಯಾಯಶಾಸ್ತ್ರಜ್ಞರು ಮಾತ್ರವಲ್ಲದೆ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡಿ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.

ಉಪನ್ಯಾಸಕರಾದ ಮಂಜು ಆರ್ ಅನುಷಾ ಡಿ.ಜೆ. ಹಾಗೂ ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳಾದ ಆರತಿ ಪ್ರಾರ್ಥಿಸಿ. ಸಾಮು ಸ್ವಾಗತಿಸಿ. ಶಹನಾಜ್ಹ್ ವಂದಿಸಿ, ಯಶಸ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!