April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ತೆಂಕುಬೈಲು ಪತ್ತನಾಜೆಯ ವಾರ್ಷಿಕ ನೇಮೋತ್ಸವದ ಪೂರ್ವಭಾವಿ ಸಭೆ ಹಾಗೂ ಸೇವಾ ಸಮಿತಿ ರಚನೆ

ಕೊಕ್ಕಡ: ಇಲ್ಲಿಯ ತೆಂಕುಬೈಲು ಪತ್ತನಾಜೆಯ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿಯ ರಚನೆಯು ಸೇವಾ ಸಮಿತಿಯು ಆಡಳಿತದಾರರಾದ ವಿಶ್ವನಾಥ ಗೌಡ ತೆಂಕುಬೈಲು ಇವರ ನೇತೃತ್ವದಲ್ಲಿ ಎ.13ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ನೂತನ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ದಾಮಣ್ಣ ಗೌಡ ಡೆಚ್ಚಾರು, ಅಧ್ಯಕ್ಷರಾಗಿ ಗಣೇಶ ಗೌಡ ಕಲಾಯಿ, ಉಪಾಧ್ಯಕ್ಷರಾಗಿ ವಿಶ್ವನಾಥ ಕಕ್ಕುದೋಳಿ, ಕಾರ್ಯದರ್ಶಿಯಾಗಿ ನಾರಾಯಣ ಗೌಡ ತೆಂಕುಬೈಲು, ಉಪಕಾರ್ಯದರ್ಶಿಗಳಾಗಿ ವಿಠಲ ಕುರ್ಲೆ ಮತ್ತು ಶ್ರೀಮತಿ ಜಯಶ್ರೀ ತೆಂಕುಬೈಲು, ಕೋಶಾಧಿಕಾರಿಯಾಗಿ ವಸಂತ ಪಿತ್ತಲಕೋಡಿ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳಾಗಿ ಕ್ಯಾಪ್ಟನ್ ನಾಗೇಶ್ ಕುರ್ಲಾಜೆ, ಬಾಬು ತೆಂಕುಬೈಲು, ಡೊಗ್ರ ಗೌಡ ಮುಂಡೂರುಪಳಿಕ್ಕೆ, ಪ್ರಸನ್ನ ಗೌಡ ತೆಂಕುಬೈಲು, ಲೇಖಾನಂದ ಗೌಡ ಬಾಲ್ತಿಮಾರು ಇವರುಗಳನ್ನು ಆಯ್ಕೆ ಮಾಡಲಾಯಿತು.

ನಂತರ ನೇಮೋತ್ಸವದ ವ್ಯವಸ್ಥೆಗಾಗಿ ಕೆಲವು ಉಪ ಸಮಿತಿಯನ್ನು ರಚಿಸಲಾಯಿತು. ಮೇ 23 ರಂದು ಕಲ್ಕುಡ- ಕಲ್ಲುರ್ಟಿ ಮತ್ತು ಪಂಜುರ್ಲಿ-ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಮೇ 24 ರಂದು ಪಿಲಿಚಾಮುಂಡಿ ದೈವಕ್ಕೆ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

Related posts

ಉಜಿರೆ ಕಲ್ಲೆಬೈಲು ನಿವಾಸಿ ಚಂದು ನಾಯ್ಕ ನಿಧನ

Suddi Udaya

ಮಹಾಕುಂಭಮೇಳದಲ್ಲಿ ಪವಿತ್ರ ಸ್ಥಾನಗೈದ ನಾರಾವಿ, ಉಪ್ಪಿನಂಗಡಿ ಮಾಂಡೋವಿ ಮೋಟರ್ಸ್ ನ ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ ಚರಣ್ ಕುಮಾರ್, ಹರ್ಷ ರೈ

Suddi Udaya

ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಸೌಜನ್ಯ ಮನೆಗೆ ಭೇಟಿ

Suddi Udaya

ಬೆಳಾಲು ಶ್ರೀ ಧ. ಮ. ಅನುದಾನಿತ ಪ್ರೌಢಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ

Suddi Udaya

ಬಳಂಜ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಹೇವ

Suddi Udaya

ಮೇ.8(ನಾಳೆ): ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ರವರಿಂದ ಬೃಹತ್ ರೋಡ್ ಶೋ ಮತ್ತು ಮತ ಯಾಚನೆ

Suddi Udaya
error: Content is protected !!