24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಮೈಂದಕೋಡಿ ಮನೆಯಲ್ಲಿ ಕಮ್ಮಟ ಭಜನೆ ಹಾಗೂ ಸತ್ಯ ದೇವತೆ ಮತ್ತು ಇತರ ದೈವಗಳ ನೇಮೋತ್ಸವ ಎ.14 ರಂದು ರಾತ್ರಿ ವಿಜೃಂಭಣೆಯಿಂದ ಜರುಗಿತು.


ನಾರಾಯಣ ಗೌಡ ಮತ್ತು ದಂಪತಿಗಳ ಹಲವು ದಿನದ ಕನಸು ಧಾರ್ಮಿಕ ಆಶಯದಂತೆ ಮನೆಯಲ್ಲಿ ಕೊಯ್ಯೂರು ಸ್ಥಳೀಯ ಮಕ್ಕಳ, ಮಹಿಳಾ ಮತ್ತು ಪುರುಷರ 6 ಭಜನಾ ತಂಡದಿಂದ ಏಕಕಾಲಕ್ಕೆ ಕುಣಿತ ಭಜನೆ ಯಶಸ್ವಿಯಾಗಿ ನಡೆಯಿತು.
ಕಾಣಿಯೂರು ಚಾರ್ವಕ ಶ್ರೀಮತಿ ಯಶೋಧ ಎ.ಹಾಗೂ ಜಯಂತ ವೈ ಪುತ್ರರಾದ ಸಾಕ್ಷಾತ್ ವೈ.ಜೆ.ಶಿವಜಿತ್ ವೈ.ಜೆ ಭಜನೆ ಹಾಡುವ ಜೊತೆಗೆ ತಾಳ, ಹಾರ್ಮೋನಿಯಂ ನುಡಿಸುವ ಮೂಲಕ ಭಜನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.
ನಂತರ ಮನೆಯ ಸತ್ಯದೇವತೆ ಹಾಗೂ ಇನ್ನಿತರ ದೈವಗಳ ನೇಮೋತ್ಸವ ನಡೆಯಿತು.

ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲಿಯಾನ್ ಕೊಯ್ಯೂರು ಮತ್ತು ಭಜನಾ ತರಬೇತುದಾರರಾದ ವಿ.ಹರೀಶ್ ನೆರಿಯ ಸಹಕಾರದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಮ್ಮಟೋತ್ಸವ ಮೆಚ್ಚುಗೆ ಪಡೆಯಿತು.

Related posts

ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಹಾಗೂ ಚಾರ್ಮಾಡಿ ಹಸನಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

Suddi Udaya

ನಾಪತ್ತೆಯಾಗಿದ್ದ ಬೆಳಾಲು ಮಾಯಾ ಅತ್ರಿಜಾಲು ತಮ್ಮಯ್ಯ ಗೌಡರ ಮೃತ‌ದೇಹ ಕೆರೆಯಲ್ಲಿ ಪತ್ತೆ- ಶವ ಮೇಲೆತ್ತಿದ‌ ಶೌಯ೯ ವಿಪತ್ತು ತಂಡ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘಕ್ಕೆ ರೂ.ಒಂದು ಲಕ್ಷ ದೇಣಿಗೆ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಜೂ.9: ಪಡಂಗಡಿಯಲ್ಲಿ ಉಚಿತ ವೈದ್ಯಕೀಯ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya
error: Content is protected !!