24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾಲ್ಕೂರು:ಪಿಯುಸಿಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾದ ಪ್ರಾಣೇಶ್ ಶೆಟ್ಟಿಯವರಿಗೆ ಸನ್ಮಾನ

ಬಳಂಜ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿ ನಾಲ್ಕೂರು ಗ್ರಾಮದ ಕುರೆಲ್ಯ ನಿವಾಸಿ ಪ್ರಾಣೇಶ್ ಶೆಟ್ಟಿ 559 ಅಂಕಗಳೊಂದಿಗೆ ಶೇ.93 ಪಡೆದ ಅವರನ್ನು ಅವರ ನಿವಾಸದಲ್ಲಿ ಎ.14 ರಂದು ಸನ್ಮಾನಿಸಲಾಯಿತು.

ಬಳಂಜ ಶಿಕ್ಷಣ ಟ್ರಸ್ಟ್,ಬಳಂಜ ಶಾಲಾ ಅಮೃತಾ ಮಹೋತ್ಸವ ಸಮಿತಿ, ಶಾಲಾಭಿವೃದ್ದಿ ಸಮಿತಿ,ಹಳೆ ವಿದ್ಯಾರ್ಥಿ ಸಂಘ,ಶ್ರೀ ಉಮಾಮಹೇಶ್ವರ ಯುವಕ ಮಂಡಲ, ಜ್ಯೋತಿ ಮಹಿಳಾ ಮಂಡಲ ಹಾಗೂ ವಿದ್ಯಾಭಿಮಾನಿಗಳ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಳಂಜ ಪ್ರೌಢ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಕೆ.ವಸಂತ ಸಾಲಿಯಾನ್,ತಾ.ಪಂ ಮಾಜಿ ಸದಸ್ಯ ಹೆಚ್ ಧರ್ಣಪ್ಪ ಪೂಜಾರಿ,ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ,ಪ್ರಮುಖರಾದ ರತ್ನರಾಜ್ ಜೈನ್,ಸಂತೋಷ್ ಕುಮಾರ್ ಕಾಪಿನಡ್ಕ, ವಿನು ಬಳಂಜ, ರಾಕೇಶ್ ಹೆಗ್ಡೆ ಬಳಂಜ, ರವೀಂದ್ರ ಶೆಟ್ಟಿ ಬಳಂಜ, ಪ್ರವೀಣ್ ಕುಮಾರ್ ಹೆಚ್‌ ಎಸ್, ಸಂತೋಷ್ ಪಿ ಕೋಟ್ಯಾನ್ ಬಳಂಜ, ದಿನೇಶ್ ಪೂಜಾರಿ ಅಂತರ,ಹಿರಿಯರಾದ ನೋಣಯ್ಯ ಶೆಟ್ಟಿ ಕುರೆಲ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಣೇಶ್ ಶೆಟ್ಟಿಯವರ ಹೆತ್ತವರಾದ ನಾಲ್ಕೂರು ಗ್ರಾಮದ ಕುರೆಲ್ಯ ನಿವಾಸಿ ರಾಜೇಶ್ ಶೆಟ್ಟಿ- ಪ್ರಮೀಳಾ ಶೆಟ್ಟಿ ದಂಪತಿ ಮಗನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Related posts

ಪ್ರಕೃತಿ ವಿಸ್ಮಯ: ಒಂದೇ ಗೊನೆಯಲ್ಲಿ ಎರಡು ಬಾಳೆ ಹೂ(ಪೂಂಬೆ)

Suddi Udaya

ನಡ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆ ಹಳೆಪೇಟೆ ಬಳಿ ಮತ್ತೆ ರಸ್ತೆಗುರುಳಿದ ಮರ: ತಪ್ಪಿದ ಭಾರಿ ಅಪಾಯ

Suddi Udaya

ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಗೆ ಆಯ್ಕೆ

Suddi Udaya

ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳ ದಾಳಿ: ಅಪಾರ ಹಾನಿ

Suddi Udaya

ಅ.22 ರಂದು ಬಳಂಜದಲ್ಲಿ ವೈಭವದ ಶಾರದಾ ಮಹೋತ್ಸವ: ಪೂರ್ವತಯಾರಿ ಬಗ್ಗೆ ಸಮಾಲೋಚನೆ ಸಭೆ

Suddi Udaya
error: Content is protected !!