
ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ಹಾಗೂ ಪ್ರಾಮಾಣಿಕ ಸಂಸ್ಥೆಯಾಗಿ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿದ ಪವರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಏ.15ರಂದು ಮಧ್ಯಾಹ್ನ ನಡೆಯಿತು.

ಉದ್ಘಾಟನೆಯನ್ನು ಕಟ್ಟಡದ ಮಾಲಕರಾದ ರಾಮದಾಸ್ ಪೈ ನೆರೆವೇರಿಸಿದರು ಮತ್ತು ಡ್ರಾವನ್ನು ಲೋಬೋ ಟಿ.ವಿ.ಎಸ್ ಮಾಲಕರಾದ ರೋನಾಲ್ಡ್ ಲೋಬೋ ನೆರೆವೇರಿಸಿದರು.

ಮೂರನೇ ನೇ ಹಂತದ ಡ್ರಾದಲ್ಲಿ ನಂಬರ್ 2189 ಪ್ರಣಿವಿ ಕೆದ್ದು ನೀಲಿ ಬಣ್ಣದ ಟಿ.ವಿ.ಎಸ್.ಸ್ಕೂಟರ್ ಲಭಿಸಿದೆ.ಪವರ್ ಆನ್‌ಸಂಸ್ಥೆ ವತಿಯಿಂದ ಡ್ಯಾನ್ಸ್ ಟು ಡ್ಯಾನ್ಸ್ ಎಂಬ ಅನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದರು ಅದರಲ್ಲಿ ಅತೀ ಹೆಚ್ಚು ಲೈಕ್ಸ್ ಬಂದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಬಹುಮಾನ ಅರ್ಚನಾ ಕಡಬ, ಅರ್ಶಿಕಾ ಪೂಜಾರಿ ಬಂಟ್ವಾಳ, ದ್ವಿತೀಯ ಬಹುಮಾನ ಸಾನಿಧ್ಯ ಉಜಿರೆ, ತೃತೀಯ ಬಹುಮಾನ ರಮ್ಯಾ ಉಪ್ಪಿನಂಗಡಿ ಮತ್ತು ವೈಷ್ಣವಿ ಉಜಿರೆ ಪಡೆದರು.30ನೇ ತಾರೀಕಿನ ಒಳಗೆ ಕಂತನ್ನು ಕಟ್ಟಿದ್ದವರಿಗೆ ಒಂದು ವಿಶೇಷ ಬಹುಮಾನ ಕೂಡ ಸಿಕ್ಕಿತ್ತು.ಇನ್ನೂ 10ನೇ ತಾರೀಕು ಒಳಗೆ ಕಂತನ್ನು ಕಟ್ಟಿದ್ದವರಿಗೆ ಚಿನ್ನದ ನಾಣ್ಯ ಬಹುಮಾನ ಕೂಡ ಸಿಕ್ಕಿತು.
ಲೋಬೋ ಟಿ.ವಿ.ಎಸ್.ಮಾಲಕ ರೋನಾಲ್ಡ್ ಲೋಬೋ ಮಾತನಾಡಿ ಪವರ್ ಆನ್ ಸಂಸ್ಥೆ ಬೆಳ್ತಂಗಡಿಯಲ್ಲಿ ಪ್ರಸಿದ್ಧವಾದ ಸಂಸ್ಥೆಯಾಗಿದೆ.
ಶೀತಲ್ ಜೈನ್‌ರವರು ತುಂಬಾ ಶ್ರಮ ಪಟ್ಟಿದ್ದಾರೆ.ತುಂಬಾ ಕಷ್ಟಪಟ್ಟು ಉದ್ಯಮವನ್ನು ಬೆಳೆಸಿದ್ದಾರೆ. ಅವರು ತುಂಬಾ ಸೇವೆಯನ್ನು ಮಾಡುತ್ತಾರೆ. ಅವರ ಹತ್ತಿರ ಏನಾದರೂ ಹೇಳಿದರೆ ತಕ್ಷಣ ಸ್ಪಂದಿಸುತ್ತಾರೆ ಎಂದರು.
ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್ ಎಲ್ಲರನ್ನು ಸ್ವಾಗತಿಸಿದರು.ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.