April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೂಡುಕೋಡಿ ಶ್ರೀ ಸತ್ಯ ಸಾರಮಾನಿ ದೈವಸ್ಥಾನದ ಆಡಳಿತ ಸಮಿತಿಯಿಂದ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ


ಮೂಡುಕೋಡಿ : ಇಲ್ಲಿಯ ಕೊಪ್ಪದಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಟ್ರಸ್ಟ್ ಇದರ ಆಡಳಿತ ಸಮಿತಿಯಿಂದ ಡಾll ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಶ್ರೀ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಆಚರಿಸಲಾಯಿತು.

ಶ್ರೀ ಸತ್ಯ ಸಾರಮಾನಿ ದೈವಸ್ಥಾನದ ಹಿರಿಯರಾದ ಬಾಬು ಕಲ್ಯರಡ್ಡ ಹಾಗೂ ವೇಣೂರು ಗ್ರಾಮ ಪ೦ಚಾಯತ್ ಸದಸ್ಯರಾದ ಅನೂಪ್ ಜೆ ಪಾಯಸ್ ದೀಪ ಬೆಳಗಿಸಿದರು.

ಡಾll ಬಿ. ಆರ್. ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾಚ೯ನೆ ಗೈದು ಮಾತನಾಡಿದ ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ ಪಾಯಸ್ ಅಂಬೇಡ್ಕರ್ ಅವರು ದೀನ ದಲಿತರ ಶೋಷಿತ ವಗ೯ದ ಧ್ವನಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು.

ಕಾಯ೯ಕ್ರಮದಲ್ಲಿ ಕೂಚ ಹೊಸಮನೆ ಚ೦ದ್ರಶೇಖರ್ ಕೊಪ್ಪದ ಬಾಕಿಮಾರು ಗ್ರಾಮ ಪ೦ಚಾಯತ್ ಮಾಜಿ ಸದಸ್ಯೆ ಚ೦ದ್ರಾವತಿ ಅಶೋಕ್ ಹೆಗ್ಡೆ ಬೆದ್ರಡ್ಡ, ಪ್ರಮುಖರಾದ ಸುಧಾಕರ ಹೊಸಮನೆ, ಶಶಿಧರ ಹೊಸಮನೆ, ಗಜೇಂದ್ರ ಪಾಲ್ದಡ್ಕ, ಆನಂದ ಪಾದೆಮನೆ, ಸದಾನಂದ ಹೊಸಮನೆ, ಗೀತಾ ಕೊಪ್ಪದ ಬಾಕಿಮಾರು, ಶೋಭಾ ಕಲ್ಯರಡ್ಧ, ಪ್ರಶಾಂತ್ ಹೊಸಮನೆ, ಸುಜಾತಾ ಪಾಲ್ದಡ್ಕ ಉಪಸ್ಥಿತರಿದ್ದರು. ದೈವಸ್ಥಾನ ಸದಸ್ಯರಾದ ಧರ್ಮರಾಜ್ ಕೊಪ್ಪದ ಬಾಕಿಮಾರು ಸ್ವಾಗತಿಸಿ ನಿರೂಪಿಸಿದರು.

Related posts

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

Suddi Udaya

ರಿಕ್ಷಾ ಸ್ಕೂಟಿಗೆ ಡಿಕ್ಕಿ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನಾ ಸಮಾರಂಭ

Suddi Udaya

ಪಿಲಿಚಾಮುಂಡಿಕಲ್ಲು ಮತ್ತು ಗುರುವಾಯನಕೆರೆ ಶಾಲೆ ಬಳಿ ಟ್ರಾಫಿಕ್ ಪೊಲೀಸ್ ನಿಯೋಜಿಸಿ: ಕುವೆಟ್ಟು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

Suddi Udaya

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

Suddi Udaya

ಧರ್ಮಸ್ಥಳ: ಕಲ್ಲೇರಿ ನಿವಾಸಿ ಲೀಲಾವತಿ ಗೌಡ ನಿಧನ

Suddi Udaya
error: Content is protected !!