April 2, 2025
ತಾಲೂಕು ಸುದ್ದಿ

ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಸುವರ್ಣ ಆರ್ಕೇಡ್ ಗೆ ಸ್ಥಳಾಂತರ

ಬೆಳ್ತಂಗಡಿ: ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ವು ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ಸುವರ್ಣ ಆರ್ಕೇಡ್ ಕಟ್ಟಡಕ್ಕೆ ಎ.15ರಂದು ಸ್ಥಳಾಂತರ ಗೊಂಡಿತು.
ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ ಬಿ.ವಿ. ಅವರು ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಕೆ. ಜಯಕೀರ್ತಿ ಜೈನ್ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ನೇರವೇರಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಪರಮೇಶ್ ಟಿ., ಚಂದ್ರಶೇಖರ್, ಶ್ರೀಮತಿ ರತ್ನಾವತಿ, ಪ್ರಶಾಂತ ಕುಮಾರ್, ಹರಿ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವತ್ಸಲಾ ಜ್ಯೋತಿರಾಜ್, ಶಾಖಾ ವ್ಯವಸ್ಥಾಪಕ ಪಿ. ಅತಿಶಯ್ ಜೈನ್‌, ಮುಖ್ಯ ಪಶು ವೈದ್ಯಾಧಿಕಾರಿ ಡಾ/ ರವಿ ಕುಮಾರ್, ಸಬ್ ರಿಜಿಸ್ಟ್ರಾರ್ ನಾಗರಾಜ್, ಸಿಬ್ಬಂದಿ ಗಳಾದ ಶ್ರೀಮತಿ ವಿಶಾಲ, ನಿತಿನ್ ಹಾಗೂ ನಿತ್ಯನಿಧಿ ಠೇವಣಿ ಸಂಗ್ರಾಹಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಸಲಹೆಗಾರರಾದ ವಸಂತ ಸುವರ್ಣ ರವರು ಸ್ವಾಗತಿಸಿ ಉಪಾಧ್ಯಕ್ಷರಾದ ಚಿದಾನಂದ ಎಸ್. ಹೂಗಾರ್ ರವರು ವಂದಿಸಿದರು.
ಸೌಲಭ್ಯಗಳು:
ಸಹಕಾರಿ ಸಂಘದಲ್ಲಿ ಇ- ಸ್ಟಾಂಪಿಂಗ್, ಕಲರ್ ಝರಾಕ್ಸ್, ಝರಾಕ್ಸ್, ಆಯುಷ್ಮಾನ್ ಹೆಲ್ತ್ ಕಾರ್ಡ್, ಪಹಣಿ ಪತ್ರ, ಎಲ್ಲಾ ಬಗೆಯ ಸ್ಟೇಷನರಿಗಳು ಮಿತ ದರದಲ್ಲಿ ದೊರೆಯುವ ಸೌಲಭ್ಯಗಳು ಇರುತ್ತದೆ ಎಂದು ಅಧ್ಯಕ್ಷ .ಕೆ. ಜಯಕೀರ್ತಿ ಜೈನ್ ರವರು ತಿಳಿಸಿದರು.

Related posts

ಮೇಲಂತಬೆಟ್ಟು ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ: ಅಗ್ನಿಗುಳಿಗನ ಗಗ್ಗರ ಸೇವೆ

Suddi Udaya

ಮೊಗ್ರು: ಕಡಮ್ಮಾಜೆ ಫಾರ್ಮ್ ನಲ್ಲಿ 3ನೇ ವರ್ಷದ ಜೇನು ಕೃಷಿ ಮಾಹಿತಿ ಶಿಬಿರ

Suddi Udaya

ನಡ ಸ.ಹಿ.ಪ್ರಾ. ಶಾಲೆಗೆ ರೂ.1.17 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

Suddi Udaya

ನಡ: ಪದ್ಮನಾಭ ಗೌಡರ ಕೈಬೆರಳು ಕಬ್ಬು ಜ್ಯೂಸ್ ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜು

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ: “ಸಮಾಜಮುಖಿ ಸೇವೆಯಲ್ಲಿ ವಿ. ಹರೀಶ್ ನೆರಿಯ ರವರಿಗೆ ವಿಶೇಷ ಸಾಧಕ” ಪ್ರಶಸ್ತಿಯ ಗರಿಮೆ

Suddi Udaya
error: Content is protected !!