ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಸೇವೆ ಸಲ್ಲಿಸಿದವರಿಗೆ ಅಭಿನಂದನಾ ಸಮಾರಂಭ ಹಾಗೂ ಆರೋಗ್ಯ ತಪಾಸಣಾ ಶಿಬಿರ ಎ. 14 ರಂದು ದೇವಸ್ಥಾನದ ವಠಾರದಲ್ಲಿ ನೆರವೇರಿತು.
ಕಳೆದ ಮಾ.20 ರಿಂದ 28ನೇ ರವರೆಗೆ ನಿರಂತರವಾಗಿ ಸೇವೆ ಸಲ್ಲಿಸಿದ ಎಲ್ಲಾ ಸಮಿತಿಯ ಸಂಚಾಲಕರಿಗೆ ಸದಸ್ಯರಿಗೆ ಸ್ವಯಂ ಸೇವಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪ್ರಮುಖರಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿಕೆ ಧನಂಜಯ ರಾವ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿಕೆ ಲೋಕೇಶ್ ರಾವ್ ಡಾ| ಪ್ರದೀಪ್ ನಾವೂರು, ಬ್ರಹ್ಮ ಕಲಶೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಸಪ್ಪಗೌಡ ಕಾಂಜಾನು, ಪ್ರಧಾನ ಸಂಘಟನಾ ಕಾರ್ಯದರ್ಶಿ ವಿನಯ ಚಂದ್ರ ಸೇನರಬೆಟ್ಟು, ಆಡಳಿತ ಅಧಿಕಾರಿ ಮೋಹನ್ ಬಂಗೇರ, ಕೋಶಾಧಿಕಾರಿ ವಾಸುದೇವ ರಾವ್ ಕಕ್ಕೆನೇಜಿ, ಜೀರ್ಣೋದ್ಧಾರ ಮಹಿಳಾ ಸಮಿತಿಯ ಅಧ್ಯಕ್ಷ ಜ್ಯೋತಿಲಕ್ಷ್ಮಿ ಕಿಲ್ಲೂರು, ಭುಜಬಲಿ ಧರ್ಮಸ್ಥಳ, ದಿನೇಶ್ ಗೌಡ ದಿಡುಪೆ ಉಪಸ್ಥಿತರಿದ್ದರು.
ವಿನಯ ಚಂದ್ರ ಸೇನರಬೆಟ್ಟು ಸ್ವಾಗತಿಸಿ, ಬಿಕೆ ಧನಂಜಯ ರಾವ್ ವಂದಿಸಿದರು. ಡಾ| ಪ್ರಶಾಂತ್ ನಿರೂಪಿಸಿದರು.
ಉಚಿತ ವೈದ್ಯಕೀಯ ತಪಾಸಣಾ ಶಿಬಿರ:
ಈ ವೇಳೆ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಇದರ ಉದ್ಘಾಟನೆಯನ್ನು ಡಾ| ಮೇಘ ದೀಪ ಬೆಳಗಿಸಿ ಉದ್ಘಾಟಿಸಿದರು. ಶಿಬಿರದಲ್ಲಿ ಪ್ರಮುಖರಲ್ಲಿ ಮೋಹನ್ ಬಂಗೇರ, ವಾಸುದೇವ ರಾವ್ ಕಕ್ಕೆನೇಜಿ, ವಿನಯಚಂದ್ರ ಸೇನರಬೆಟ್ಟು, ರಕ್ಷಿತ್ ಇಂದಬೆಟ್ಟು, ದಾಸಪ್ಪಗೌಡ ಕಾಂಜಾನು, ಜಯರಾಜ ಕಾನರ್ಪ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿ ಕೊಲ್ಲಿ , ರೋಟರಿ ಕ್ಲಬ್ ಬೆಳ್ತಂಗಡಿ , ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಿತ್ತಬಾಗಿಲು ಇದರ ಆಶ್ರಯದಲ್ಲಿ ಈ ವೈದ್ಯಕೀಯ ತಪಾಸಣಾ ಶಿಬಿರ ನೆರವೇರಿತು.
ಡಾ| ಪ್ರಶಾಂತ್ ನಿರೂಪಿಸಿದರು. ಕೇಶವ ಫಡ್ಕೆ ಸ್ವಾಗತಿಸಿ, ವಂದಿಸಿದರು.