24.4 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಕ್ಕಿಂಜೆ: ಅನುಗ್ರಹ ಪೇಪರ್ ಪ್ಲೇಟ್ ಎಂಟರ್‌ಪ್ರೈಸಸ್ ಶುಭಾರಂಭ

ಕಕ್ಕಿಂಜೆ : ಇಲ್ಲಿಯ ಚಾರ್ಮಾಡಿ ರಸ್ತೆಯಲ್ಲಿ ಸುಜಯ್ ಮಿಯಾರು ರವರ ಮಾಲಕತ್ವದ ಅನುಗ್ರಹ ಪೇಪರ್ ಪ್ಲೇಟ್ ಎಂಟರ್‌ಪ್ರೈಸಸ್ ಇತ್ತೀಚೆಗೆ ಶುಭಾರಂಭಗೊಂಡಿತು.
ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭ ಬೆಳ್ತಂಗಡಿ ಎ.ಪಿ.ಎಂ.ಸಿ. ಸಿಬ್ಬಂದಿ ತ್ಯಾಗರಾಜ್ ಪರ್ಪಳ, ಗಂಡಿಬಾಗಿಲು ಉಮಾಪಂಚಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸಂಜೀವ ಗೌಡ ಪುನ್ಕೆದಡಿ, ಕೃಷಿಕರಾದ ರಾಜಪ್ಪ ಗೌಡ, ಕಕ್ಕಿಂಜೆ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀಕಾಂತ್, ಮಾಲಕರ ತಾಯಿ ಸುಂದರಿ, ತಂದೆ ಸಿದ್ದಪ್ಪ ಗೌಡ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ನೆರಿಯ ಗ್ರಾ.ಪಂ. ಸದಸ್ಯ ಬಾಬಣ್ಣ ಪರ್ಪಳ ಸ್ವಾಗತಿಸಿದರು.
ತಮ್ಮ ಸಂಸ್ಥೆಯಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಾದ ವಿವಿಧ ಮಾದರಿಯ ಪೇಪರ್ ಪ್ಲೇಟ್ ಲಭ್ಯವಿದೆ ಎಂದು ಮಾಲಕ ಪ್ರೊ. ಸುಜಯ್ ಮಿಯಾರು ತಿಳಿಸಿದರು.

Related posts

ಮುಂಡಾಜೆ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ದ್ವಿಷಾ ಯು.ಡಿ ಗೆ ರಾಜ್ಯ ಪ್ರಶಸ್ತಿ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya

ಉಜಿರೆ: ಧ.ಮಂ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ: ಖಾಸಗಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉಜಿರೆ ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನಲ್ಲಿ “ಆರೋಗ್ಯ ಸುಖಶಾಂತಿ ಮತ್ತು ಒತ್ತಡ ನಿರ್ವಹಣೆ” ಕುರಿತು ಕಾರ್ಯಾಗಾರ

Suddi Udaya

ಕೆಎಸ್ಆರ್ ಟಿಸಿ ಮಜ್ದೂರು ಸಂಘದ ವಾರ್ಷಿಕ ಸಭೆ

Suddi Udaya
error: Content is protected !!