ಬಳಂಜ: ಇತಿಹಾಸ ಪ್ರಸಿದ್ಧ ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿದೆ.
ಶ್ರೀ ಕ್ಷೇತ್ರದಲ್ಲಿ ದೇವರ ದರ್ಶನ ಬಲಿ ಉತ್ಸವ,ಕಲಶಾಭಿಷೇಕ, ವಸಂತ ಕಟ್ಟೆ ಪೂಜೆ,ಅಶ್ವಥ ಕಟ್ಟೆ ಸಮರ್ಪಣೆ, ಹರಿನಾಮ ಸಂಕೀರ್ತನೆ, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವ ಮತ್ತು ದೇವರ ಭೇಟಿ,ರಥ ಪೂಜೆ, ಮಹಾಪೂಜೆ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಊರ ಪರವೂರ ಭಕ್ತಾದಿಗಳು ದೇವರ ದರ್ಶನ ಪಡೆದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಬಿ ಶೀತಲ್ ಪಡಿವಾಲ್ ರವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯಿತು.
ಮನೋರಂಜನಾ ಕಾರ್ಯಕ್ರಮಗಳು: ಜಾತ್ರ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶ್ರೀ ಪಂಚಲಿಂಗೇಶ್ವರ ಹವ್ಯಾಸಿ ಯಕ್ಷಗಾನ ತರಭೇತಿ ಕೇಂದ್ರದ ಮಕ್ಕಳಿಂದ ಗಿರಿಜಾ ಕಲ್ಯಾಣ ಯಕ್ಷಗಾನ, ಅರೆಹೊಳೆ ಪ್ರತಿಷ್ಠಾನ ಮಂಗಳೂರು ಕುಂದಾಪುರ ತಂಡದವರಿಂದ ಸಾಂಸ್ಕೃತಿಕ ವೈಭವ, ಕೊಡಿಯಲ್ ಬೈಲ್ ರಚಿಸಿ, ನಿರ್ದೇಶನದ ಮೈತಿದಿ ತುಳು ನಾಟಕ ಪ್ರದರ್ಶನಗೊಂಡಿತು.