ಬೆಳ್ತಂಗಡಿ: ದ.ಕ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಈಗಾಗಲೇ ತಾಲೂಕಿಗೆ ಪ್ರಚಾರಕ್ಕಾಗಿ ಬಂದಿದ್ದು ಏ.17ರಂದು ಮತ್ತೊಂದು ಬಾರಿ ಬೆಳ್ತಂಗಡಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮತಪ್ರಚಾರ ಮಾಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಹೇಳಿದರು.
ಅವರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಏ.16ರಂದು ಸಂತೆಕಟ್ಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಏ.21 ಕ್ಕೆ ನಮ್ಮ ಬೂತ್ ನಮ್ಮ ಹೊಣೆ ಎಂಬ ಕಾರ್ಯಕ್ರಮ ಆಯೋಜಿಸಿದ್ದು ಅದರಲ್ಲಿ ಪ್ರತಿ ಬೂತ್ ನ ನಾಯಕರು ಮನೆ ಮನೆಗೆ ಹೋಗಿ ಮತವನ್ನು ಕೇಳಬೇಕು ಮತ್ತು ಬೂತ್ ನ ನಾಯಕರು ಅತೀ ಹೆಚ್ಚು ಬೂತ್ ನಲ್ಲಿ ಮತ ಬರುವ ರೀತಿ ನೋಡಿಕೊಳ್ಳಬೇಕು ಅದಕ್ಕಾಗಿ ನಮ್ಮ ಬೂತ್ ನಮ್ಮ ಹೊಣೆ ಎಂಬ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.
ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷದಿಂದ ಅಲ್ಪಸಂಖ್ಯಾತರನ್ನು ಬದುಕಲು ಬಿಟ್ಟಿಲ್ಲ. ಹತ್ತು ವರ್ಷದಲ್ಲಿ ಸಿಗದ ನೆಮ್ಮದಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ 10 ತಿಂಗಳಿನಲ್ಲಿ ಸಿಕ್ಕಿದೆ.
ಮತ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ರಮಾನಾಥ್ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷರುಗಳಾದ ಸತೀಶ್ ಬಂಗೇರ ಕಾಶಿಪಟ್ಟ ಹಾಗೂ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನಸಭಾ ಚುನಾವಣಾ ಉಸ್ತುವರಿ ಮತ್ತು ಪ್ರಚಾರ ಸಮಿತಿಯ ಧರಣೇಂದ್ರ ಕುಮಾರ್ ಹಾಗೂ ಶೇಖರ್ ಕುಕ್ಕೇಡಿ ಭಾಗವಹಿಸಲಿದ್ದಾರೆ ಎಂದರು.
ಬೆಳ್ತಂಗಡಿ ಅಲ್ಪಸಂಖ್ಯಾತರ ಅಧ್ಯಕ್ಷ ಅಬ್ದುಲ್ ಕರೀಂ ಗೇರುಕಟ್ಟೆ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಹಿಳೆಯರಿಗೆ ಹೇಳಿದ ಮಾತನ್ನು ನಾವು ಖಂಡಿಸುತ್ತೇವೆ. ಪಕ್ಷ ಸಮಾವೇಶದಲ್ಲಿ ವಸಂತ ಬಂಗೇರ ಮತ್ತು ರಕ್ಷಿತ್ ಶಿವರಾಂ ಅಜ್ಜಿ ಪುಲ್ಲಿ ಎಂದು ಅತೀ ಕೀಳಾಗಿ ಮಾತನಾಡಿದ್ದನ್ನು ಖಂಡಿಸುತ್ತೇವೆ. ಅಲ್ಪಸಂಖ್ಯಾತರ ಬಗ್ಗೆ ಏನಾದರೂ ಕೀಳಾಗಿ ಮಾತನಾಡಿದರೆ ನಾವು ಶಾಸಕರ ಮನೆಗೆ, ಕಛೇರಿಗೆ ಬಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಹನೀಫ್ ಉಜಿರೆ, ಜೈಸನ್, ಜೋಡ್ಜ್, ಕೆ.ಎಂ. ಮುಸ್ತಾಪ ಸುಳ್ಯ, ಎಂ ಉಮಾರಬ್ಬ ಮದಡ್ಕ, ಖಾಲಿದ್ ಪುಲಾಬೆ ಹಾಗೂ ವಿವಿಧ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.