September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯ ಮಹಮ್ಮದ್ ರಯ್ಯಾನ್ ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಜಿರೆ: ಹಾಸನ ಡಿಸ್ಟ್ರಿಕ್ಟ್ ಕರಾಟೆ ಅಸೋಸಿಯೇಷನ್ (ರಿ),ಮೌಲ್ ಶೂಟೋಕಾನ್ ಕರಾಟೆ  ಡೊ ಅಸೋಸಿಯೇಷನ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ (ರಿ) ಸಹಯೋಗದಲ್ಲಿ ಹಾಸನದ ಹಾಸನಾಂಬಾ ಇನ್ ಡೋರ್ ಸ್ಟೇಡಿಯಂ ನಲ್ಲಿ ಜ. 7ರಂದು ನಡೆದ ಹಾಸನ್ ಓಪನ್ 3 ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ- 2024 ರಲ್ಲಿ ವೈಯಕ್ತಿಕ ಫೈಟಿಂಗ್ ಮತ್ತು ಕಟಾ ವಿಭಾಗದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 5 ನೇ ತರಗತಿಯ ಮಹಮ್ಮದ್ ರಯ್ಯಾನ್ ಅವರು ಪ್ರಥಮ ಸ್ಥಾನ ಮತ್ತು 2  ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.           

 ಮಹಮ್ಮದ್ ರಯ್ಯಾನ್ ಅವರು ಉಜಿರೆಯ ಗಾಂಧಿನಗರ ನಿವಾಸಿ ಬಿ. ಎಚ್. ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ ಮತ್ತು ಸೆನ್ಸಾಯ್ ಸಿಹಾನ್ ಅಬ್ದುಲ್ ರಹಮಾನ್ ಅವರಿಂದ ತರಬೇತಿ ಪಡೆದಿದ್ದರು. ಅವರು ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದ್ರಿಯಲ್ಲಿ ನಡೆದ ರಾಜ್ಯ ಮಟ್ಟದ 2೦ನೇ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.                     

ಹಾಸನದ ಶಾಸಕ ಸ್ವರೂಪ ಪ್ರಕಾಶ್,ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್  ಅಧ್ಯಕ್ಷ ಕ್ಯೋಶಿ  ಎಂ. ಅಲ್ತಾಫ್ ಪಾಷಾ,.ಕರಾಟೆ ಅಸೋಸಿಯೇಷನ್ ಜನರಲ್ ಸೆಕ್ರೆಟರಿ, ಪಂದ್ಯಾವಳಿ ನಿರ್ದೇಶಕ ರೆನ್ಷಿ ಶಿವಮೊಗ್ಗ ವಿನೋದ್ ಮತ್ತು ಹಾಸನ ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೆನ್ಸಾಯಿ ಮಹಮ್ಮದ್ ಆರಿಫ್ ಪ್ರಶಸ್ಥಿ ಪತ್ರ ಮತ್ತು ಚಿನ್ನದ ಪದಕ ತೊಡಿಸಿ ಅಭಿನಂದಿಸಿ ಗೌರವಿಸಿದರು.

Related posts

ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಆಸರೆ 3ನೇ ಮನೆ ಹಸ್ತಾಂತರ

Suddi Udaya

ಬೆಳ್ತಂಗಡಿ : ಶ್ರೀ ಗುರುದೇವ ಕಾಲೇಜಿನ ಕ್ರೀಡಾಕೂಟ ಉದ್ಘಾಟನೆ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ- 2 ರ ಫಲಿತಾಂಶ : ವಾಣಿ ಪ.ಪೂ. ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ವಿಭಾ ಕೆ.ಆರ್ ರಾಜ್ಯಕ್ಕೆ 6ನೇ ಸ್ಥಾನ

Suddi Udaya

ಕೊಕ್ಕಡ : ಮಾಯಿಲಕೋಟೆ ಸೀಮೆ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವ

Suddi Udaya

ಸುಲ್ಕೇರಿ ಭಗವಾನ್ ಶ್ರೀ ನೇಮಿನಾಥ ಸ್ವಾಮೀ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಬಂದಾರು: ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

Suddi Udaya
error: Content is protected !!