ಓಡಿಲ್ನಾಳ : ಇಲ್ಲಿಯ ಗುಂಪಲಾಜೆ – ಪಣೆಜಾಲು ನಾಗ-ರಕ್ತೇಶ್ವರಿ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಕಾಳಮ್ಮ, ಮಹಮ್ಮಾಯಿ-ಬೈರವ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವವು ಅಳದಂಗಡಿ ಪ್ರಕಾಶ್ ಭಟ್ ರವರ ಮಾರ್ಗದರ್ಶನದಲ್ಲಿ, ಕಿರಣ್ ಭಟ್ ರವರ ನೇತೃತ್ವದಲ್ಲಿ ಏ.23ರಿಂದ ಏ.24ರ ವರೆಗೆ ವಿವಿಧ ವೈದಿಕ,ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಏ.23ರಂದು ಗುರುವಾಯನಕೆರೆಯಿಂದ ನಾಗಚಾವಡಿ ಸಾನ್ನಿಧ್ಯ ಕ್ಷೇತ್ರದವರೆಗೆ ವಿವಿಧ ಕುಣಿತ ಭಜನಾ ತಂಡಗಳಿಂದ “ಕುಣಿತ ಭಜನೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ. ಆನಂದ ಶೆಟ್ಟಿ ವಾತ್ಸಲ್ಯ ಪಾಡ್ಯಾರು ಹೊರೆಕಾಣಿಕೆಯ ಚಾಲನೆ ನೀಡಲಿದ್ದಾರೆ. ಋತ್ವಿಜಯರಿಗೆ ಸ್ವಾಗತ, ಪ್ರಾರ್ಥನೆ, ಗೋಪೂಜೆ, ವೈದಿಕ ವಿಧಿ ವಿಧಾನಗಳು, ರಾತ್ರಿ ಅನ್ನಸಂತರ್ಪಣೆ, ಶ್ರೀ ನಾಳ ದುರ್ಗಾಪರಮೇಶ್ವರಿ ಕೃಪಾಪೋಷಿತಾ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಮಾಯಕೊದ ಸತ್ಯ ಕಲ್ಲುರ್ಟಿ ಯಕ್ಷಗಾನ ಬಯಲಾಟ ನಡೆಯಲಿದೆ.
ಏ.24 ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ, ಪವಮಾನ ಹೋಮ, ಕೂಷ್ಮಾಂಡ ಹೋಮ, ಕಲಶ ಪೂಜೆ, ಪ್ರಧಾನ ಹೋಮ, ಆಶ್ಲೇಷ ಬಲಿ, ವೃಷಭ ಲಗ್ನದಲ್ಲಿ ನಾಗದೇವರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ ಸಂದೇಶ್ ಅನಿಲ ಮದ್ದಡ್ಕ ಮತ್ತು ಬಳಗ ಇವರಿಂದ ಭಜನಾ ಸಂಕೀರ್ತನೆ, ಮರಾಠಿ ನಾಯ್ಕ್ ಬಳಗ, ಬೆಳ್ತಂಗಡಿ ಇವರಿಂದ ಗುಮ್ಮಟೆ ಕುಣಿತ ನಡೆಯಲಿದೆ.
ಸಂಜೆ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭೆಯ ಸಭಾಧ್ಯಕ್ಷತೆಯನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡ ವಹಿಸಲಿದ್ದಾರೆ. ಡಾ ||ಪ್ರದೀಪ್ ಧಾರ್ಮಿಕ ಉಪನ್ಯಾಸವನ್ನು ನೀಡಳಿದ್ದು ಮುಖ್ಯ ಅತಿಥಿಗಳಾಗಿ ಉದ್ಯಮಿ ಶೇಖರ್ ಶೆಟ್ಟಿ ಪಣೆಜಾಲು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಧರ್ಮದರ್ಶಿ ಹರೀಶ್, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸತೀಶ್ ಶೆಟ್ಟಿ ದೊಡ್ಡಮನೆ, ರಾಜು ಶೆಟ್ಟಿ ಬೇಂಗತ್ಯಾರು, ಉದ್ಯಮಿ ಉಮೇಶ್ ಶೆಟ್ಟಿ, ಅರಮಲೆಬೆಟ್ಟ ಕೊಡಮಣಿತ್ತಾಯ ಕ್ಷೇತ್ರ ಮೊಕ್ತೇಸರರು ಸುಖೇಶ್ ಕುಮಾರ್ ಜೈನ್, ಉದ್ಯಮಿ ಬಿ.ಕೆ. ಸತೀಶ್ ಆಚಾರ್ಯ, ಯತೀಶ್ ಕುಲಾಲ್ ಸಿರಿಮಜಲು, ನೋಟರಿ ವಕೀಲರು ಮುರಳಿ ಬಲಿಪ, ಮೋಹನ್ ಕುಮಾರ್, ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆ, ವಾಸು ತಜ್ಞ ರತ್ನಾಕರ ಭಟ್, ಉದ್ಯಮಿಗಳು,ವೇಣೂರು ಪ್ರಾ.ಕೃ.ಪ.ಸ.ಸ. ಅಧ್ಯಕ್ಷ ಸುಂದರ ಹೆಗ್ಡೆ, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಬೆಳ್ತಂಗಡಿ ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ಧನಲಕ್ಷ್ಮೀ ಜುವೆಲ್ಸ್ ಮಾಲಕ ಕೆ. ರಮೇಶ್ ಆಚಾರ್ಯ ಉಪಸ್ಥಿತರಿರಲಿದ್ದಾರೆ.
ರಾತ್ರಿ ಅನ್ನಸಂತರ್ಪಣೆ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಕಾಳಮ್ಮ ದೈವಗಳಿಗೆ ನೇಮೋತ್ಸವ ಜರುಗಲಿದೆ.