September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕನ್ಯಾಡಿ: ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಹನುಮಾನ್ ರಥೋತ್ಸವ

ಕನ್ಯಾಡಿ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದಲ್ಲಿ ನಡೆಯುತ್ತಿರುವ 64ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಎ. 16ರಂದು ಬೆಳಿಗ್ಗೆ ದತ್ತಯಾಗ, ಮಧ್ಯಾಹ್ನ ಆಂಜನೇಯ ದೇವರಿಗೆ ಮತ್ತು ದತ್ತಾತ್ರೇಯ ಗುರುಗಳಿಗೆ ವಿಶೇಷ ಪೂಜೆ, ಸಂಜೆ ವಿವಿಧ ವೈದಿಕ ಕಾರ್ಯಕ್ರಮಗಳು, ರಾತ್ರಿ ದತ್ತಾತ್ರೇಯ ಮೂರ್ತಿ ಮತ್ತು ಆಂಜನೇಯ ದೇವರ ಮೂರ್ತಿ ಬಲಿಮೂರ್ತಿ ಉತ್ಸವ ನಂತರ ಶ್ರೀ ಹನುಮಾನ್ ರಥೋತ್ಸವ ನಡೆಯಿತು.

ಇಂದು (ಎ.17) ರಾಮನವಮಿ ಬೆಳಿಗ್ಗೆ ಸಹಸ್ರ ನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳಂ ನಡೆಯಿತು. ಮದ್ಯಾಹ್ನ ಹಗಲು ಉತ್ಸವ ರಾತ್ರಿ ಶ್ರೀ ಬಲಿ, ಭೂತ ಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ, ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಂತರ ಮಹಾ ಬ್ರಹ್ಮ ರಥೋತ್ಸವ ನಡೆಯಲಿದೆ.

Related posts

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಚ್ಚಿನ ಘಟಕ ಹಾಗೂ ವಿವಿಧ ಸಂಘಗಳಿಂದ ರಾಮ ದೀಪೋತ್ಸವ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸದಸ್ಯರಿಗೆ 15 ಶೇ. ಡಿವಿಡೆಂಟ್

Suddi Udaya

ಕಡಿರುದ್ಯಾವರ: ಎರ್ಮಾಲ್ ಪಲ್ಕೆಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಜನಸಾಮಾನ್ಯರು

Suddi Udaya

ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

Suddi Udaya

ರೂ. 6 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ಮರು ಡಾಮರೀಕರಣ ಕಾಮಗಾರಿ: ಶಾಸಕ ಹರೀಶ್‌ ಪೂಂಜ ಉಪಸ್ಥಿತಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟರಿಂದ ಶಿಲಾನ್ಯಾಸ

Suddi Udaya
error: Content is protected !!