ಬೆಳ್ತಂಗಡಿ: ಜಿಲ್ಲಾ ವೈದ್ಯಕೀಯ ಮಂಡಳಿಯೊಂದಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿಯಲ್ಲಿ ತಾಲೂಕಿನ ವಿಕಲಚೇತನರ ಗುರುತಿನ ಚೀಟಿಯ ನವೀಕರಣ ಹಾಗೂ ಹೊಸ ವಿಕಲಚೇತನರ ಗುರುತಿಸುವಿಕೆಯ ಶಿಬಿರವನ್ನು ಎ.16 ರಂದು ನಡೆಸಲಾಯಿತು.
ಶಿಬಿರದ ಮುಂದಾಳತ್ವವನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕರು (MRW ) ಆದ ಜೋನ್ ಬ್ಯಾಪಿಸ್ಟ್ ರವರ ಮುಂದಾಳತ್ವದಲ್ಲಿ ನಡೆಯಿತು.
ಶಿಬಿರದಲ್ಲಿ ತಾಲೂಕಿನ ನಗರ ಪುನರ್ ವಸತಿ ಕಾರ್ಯಕರ್ತರಾದ ಫೌಝಿಯಾ ನಗರ ಪಂಚಾಯತ್ ಬೆಳ್ತಂಗಡಿ, ಹಾಗೂ ವಿವಿಧ ಗ್ರಾಮ ಪಂಚಾಯತ್ ನ ಗ್ರಾಮೀಣ ಪೂರ್ವಸತಿ ಕಾರ್ಯಕರ್ತರಾದ ರಂಜನ್ ವೇಣೂರು ಗ್ರಾಮ ಪಂಚಾಯತ್ , ತ್ರಿಪುಣ್ಯ ಪಟ್ರಮೆ ಗ್ರಾಮ ಪಂಚಾಯತ್ , ಗೀತಾ ಬಾರ್ಯ ಗ್ರಾಮ ಪಂಚಾಯತ್ , ಸೌಮ್ಯ ಹೊಸಂಗಡಿ ಗ್ರಾಮ ಪಂಚಾಯತ್ , ಸುಜಾತ ಆರಂಬೋಡಿ ಗ್ರಾಮ ಪಂಚಾಯತ್ , ದೀಕ್ಷಿತ ಪಡಂಗಡಿ ಗ್ರಾಮ ಪಂಚಾಯತ್, ಸಹಕಾರ ನೀಡಿ ತಾಲೂಕಿನ ಅನೇಕ ವಿಕಲಚೇತನರಿಗೆ ಬುದ್ಧಿಮಾಂದ್ಯ ಮತ್ತು ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡ ಸರ್ಕಾರ ಸೌಲಭ್ಯ ವನ್ನು ಪಡೆದುಕೊಳ್ಳಲು ಸಹಕರಿಸಿದರು.