24.3 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಉಜಿರೆ : ಪ್ರಗತಿ ಮಹಿಳಾ ಮಂಡಲ ನೇತೃತ್ವದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ

ಉಜಿರೆ : ಪ್ರಗತಿ ಮಹಿಳಾ ಮಂಡಲ ಉಜಿರೆ ನೇತೃತ್ವದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಉಜಿರೆ ಅನುಗ್ರಹ ಪ್ರೈಮರಿ ಶಾಲೆಯ ಸಭಾಂಗಣದಲ್ಲಿ ಎ.18 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಉಜಿರೆ ಸೈಂಟ್‌ ಆಂಟೋನಿ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡೀಸ್, ಉಜಿರೆ ಪ್ರಗತಿ ಮಹಿಳಾ ಮಂಡಲ ಗೌರವ ಸಲಹೆಗಾರರು ಶ್ರೀಮತಿ ಜ್ಯೋತಿ. ಪಿ.ನಾಯಕ್‌, ಉಜಿರೆ ಪ್ರೇರಣಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶೀಲಾ ಮಹಾಬಲ ಉಪಸ್ಥಿತರಿದ್ದರು.

ವ್ಯಂಗ್ಯ ಚಿತ್ರಕಾರ ಸತೀಶ್ ಕಾನತ್ತೂರು, ಶ್ರೀಮತಿ ರೇವತಿ, ಶ್ರೀಮತಿ ಚೇತನಾ, ಶ್ರೀಮತಿ ಅನ್ನಪೂರ್ಣ, ಸಂಯೋಜಕಿ ಭವ್ಯಶ್ರೀ ಕೀರ್ತಿರಾಜ್ ಇವರನ್ನು ಗೌರವಿಸಲಾಯಿತು.

ಶಿಬಿರಾರ್ಥಿಗಳಾದ ಅನ್ವಿಕಾ ರೋಡ್ರಿಗಸ್, ಶಿವಪ್ರಸಾದ್ ರವರಿಂದ ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಹೆತ್ತವರ ಪರವಾಗಿ ಕ್ಷಮಾ ಭಾರಧ್ವಜ್ ಹಾಗೂ ವ್ಯಂಗ್ಯ ಚಿತ್ರಕಾರರಾದ ಸತೀಶ್ ಕಾನತ್ತೂರು, ಶಿಬಿರದ ಬಗ್ಗೆ ಶೀಲಾ ಮಹಾಬಲ ಹಾಗೂ ಸಂಯೋಜಕಿ ಭವ್ಯಶ್ರೀ ಕೀರ್ತಿರಾಜ್ ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಿಂದ ತಾವು ಕಲಿತಾ ಯೋಗ ಪ್ರದರ್ಶನ ಹಾಗೂ ನೃತ್ಯ ಪ್ರದರ್ಶನವು ನಡೆಯಿತು.

ನೈಮಿಕಾ, ಅನನ್ಯ ಪ್ರಾರ್ಥಿಸಿ, ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಸ್ವಾಗತಿಸಿ, ಗಾಯತ್ರಿ ಶ್ರೀಧರ್ ನಿರೂಪಿಸಿದರು., ಅನ್ನಪೂರ್ಣ ಧನ್ಯವಾದವಿತ್ತರು.

Related posts

ತೆಕ್ಕಾರು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ಧರ್ಮಸ್ಥಳ: ಬಸ್‌ ಕಿಟಕಿಯಿಂದ ಇಳಿಯಲು ಯತ್ನಿಸಿದ ವ್ಯಕ್ತಿ ಆಯತಪ್ಪಿ ರಸ್ತೆಗೆ ಬಿದ್ದು ಸಾವು

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ಬಜಿರೆ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ವಿಧಾನಸಭೆಯಲ್ಲಿ ಶಾಸಕರಿಗೆ ಚೆಸ್‌ ಸ್ಪರ್ಧೆ: ತೃತೀಯ ಸ್ಥಾನ ಪಡೆದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya

ಹಿರಿಯ ಸಹಕಾರಿ ಧುರೀಣ ಮಾಜಿ ಜಿ.ಪಂ. ಉಪಾಧ್ಯಕ್ಷ ನಿರಂಜನ ಬಾವಂತಬೆಟ್ಟು ನಿಧನ

Suddi Udaya
error: Content is protected !!