ಕರಾಯ: ಸೈಕಲ್ ರಿಪೇರಿ ಮಾಡಿಸಿಕೊಟ್ಟಿಲ್ಲ ಎಂದು ನೇಣಿಗೆ ಶರಣಾದ ಹೈಸ್ಕೂಲ್ ವಿದ್ಯಾರ್ಥಿ

Suddi Udaya

Updated on:

ಬೆಳ್ತಂಗಡಿ; ಇವತ್ತು ಇನ್ವರ್ಟರ್ ರಿಪೇರಿ ಇದೆ. ಸೈಕಲ್ ನಾಳೆ ಸರಿ ಮಾಡಿಸೋಣ ಎಂದಿದ್ದಕ್ಕೆ 8 ನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯದಲ್ಲಿ ನಡೆದಿದೆ.

ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್ (13ವ) ಎಂಬಾತನೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ
ಮನೆಯ ಕಿಟಕಿಗೆ ಹಗ್ಗ ಬಳಸಿ ಕುತ್ತಿಗೆಗೆ ನೇಣು ಬಿಗಿದು ಈ ಕೃತ್ಯ ವೆಸಗಿಕೊಂಡಿದ್ದಾನೆ.

ಬಾಲಕನ ತಂದೆ ಈ‌ ಹಿಂದೆಯೇ ಮೃತ;
ಬಾಲಕನ ತಂದೆ ಪಂಜ ಗ್ರಾಮದ ರೋಹಿತ್ ಗೌಡ ಎಂಬವರು ಈಗಾಗಲೇ ಮೃತಪಟ್ಟಿದ್ದಾರೆ. ತಂದೆಯ ಮರಣದ ನಂತರ ಈತ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದು ಉಪ್ಪಿನಂಗಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ. ಶುಕ್ರವಾರದಂದು ತನ್ನ ನಾಲ್ವರು ಗೆಳೆಯರೊಂದಿಗೆ ಆಟವಾಡುತ್ತಿದ್ದ ಈತ ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮಾವನ ಮನೆಯಲ್ಲಿ ಒತ್ತಾಯಿಸಿದ್ದ. ಅದಕ್ಕೆ ಸ್ಪಂದಿಸಿದ್ದ ಮನೆಯವರು, ಹಾಳಾಗಿದ್ದ ಮನೆಯ ಇನ್ವರ್ಟರ್ ಸರಿಪಡಿಸಿರುವುದರಿಂದ ನಾಳೆ ಸೈಕಲ್ ರಿಪೇರಿ ಮಾಡಿಸೋಣ ಎಂದಿದ್ದರು. ಇದೇ ಕಾರಣಕ್ಕೆ ಮನನೊಂದ ಬಾಲಕ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮನೆಯವರು ವಿವರ ನೀಡಿದ್ದಾರೆ‌. ಇದೀಗ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Comment

error: Content is protected !!