22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ

ಬೆಳ್ತಂಗಡಿ: ದಮ್ಮಾಂ, ಕರ್ನಾಟಕ ಸಮಸ್ತ ಇಸ್ಲಾಮಿಕ್ ಸೆಂಟರ್ ಎಸ್. ಐ. ಸಿ ದಮ್ಮಾಂ ಕರ್ನಾಟಕದ ಅಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ತರ್ಬೀಯತುಲ್ ಇಸ್ಲಾಂ ದಮ್ಮಾಂ ಕರ್ನಾಟಕ ಮದ್ರಸದ 2024-2025 ನೇ ಸಾಲಿನ ಮಿಹ್ರಜಾನುಲ್ ಬಿದಾಯ ವರ್ಷಾರಂಭ ಅಧ್ಯಯನ ಶಿಬಿರ ಎ 21 ಸಮಾರಂಭದ ರೂಪದಲ್ಲಿ ನಡೆಯಿತು.


ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಶೋ, ಶಿಕ್ಷಣ ರಕ್ಷಕ ಸಭೆ, ಪ್ರಾರ್ಥನಾ ಸಂಗಮ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಸ್ ಕೆ ಐ ಎಂ ವಿ ಬಿ ಅಂಗೀಕೃತ ಸಿಲೆಬಸ್‌ ಇಲ್ಲಿ ಅಳವಡಿಸಲಾಗಿದೆ ಮತ್ತು ಉತ್ತಮ ಶಿಕ್ಷಕರ ನೇತೃತ್ವದಲ್ಲಿ ಅಧ್ಯಾಯನ ನಡೆಸಲಾಗುತ್ತಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಝಾಕ್ ಮಂಡೆಕೋಲು ವಹಿಸಿದರು . ಕಾರ್ಯಕ್ರಮದ ಉದ್ಘಾಟನೆಯನ್ನು ಸವಾದ್ ಫೈಝಿ ಉಸ್ತಾದರು ಮಾಡಿದರು ಮನ್ಸೂರ್ ಹುದವಿ ಪ್ರಾಸ್ತಾವಿಕ ಭಾಷಣ ಮಾಡಿದರು ವಿಷಯ ಮಂಡನೆಯನ್ನು ಸಿನಾನ್ ಹುದವಿ ಅಲ್ ಇರ್ಶಾದಿ ಕುಪ್ಪೆಟ್ಟಿ ನಡೆಸಿದರು .


ಅಧ್ಯಯನ ಶಿಬಿರದಲ್ಲಿ ಮುಖ್ಯ ಅಧ್ಯಾಪಕರಾದ ಅಬ್ದುಲ್ ರಶೀದ್ ಫೈಝಿ ಪೋಳ್ಯ. ವಿದ್ಯಾರ್ಥಿಗಳಿಗೆ ತರಗತಿ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು .
ಕಾರ್ಯಕ್ರಮದಲ್ಲಿ ಶರೀಫ್ ಮೇನಾಳ ಸ್ವಾಗತಿಸಿ ಕಾರ್ಯಕ್ರಮದ ಸವಾದ್ ನೇರಲಕಟ್ಟೆ ಧನ್ಯವಾದ ಹೇಳಿದರು . ಕಾರ್ಯಕ್ರಮದಲ್ಲಿ ನೌಶಾದ್ ಪೋಳ್ಯ ಸುನೀರ್ ಕೂರ್ನಡ್ಕ ಬಶೀರ್ ಅಝ್ಹರಿ ಚಾರ್ಮಾಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು
ಸೌದಿ ವಿಸಿಟಿಂಗ್ ಬರುವ ಫ್ಯಾಮಿಲಿಗಳಿಗೆ ಅಡ್ಮಿಶನ್ ಕೊಡಲಾಗುವುದು. ವಾರದ ಮೂರು ದಿನ ತರಗತಿ ನಡೆಸಲಾಗುತ್ತಿದೆ

Related posts

ಜೂ.13: ಗುರುವಾಯನಕೆರೆ 11ಕೆವಿ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

Suddi Udaya

ಶಿರ್ಲಾಲು: ವಿದ್ಯುತ್ ಅವಘಡದಿಂದ ಹಿತ್ತಿಲು ಪರಿಸರದಲ್ಲಿ ಬೆಂಕಿ

Suddi Udaya

ಕೊಕ್ಕಡ: ಉಪ್ಪಾರಪಳಿಕೆ ಸ.ಉ. ಹಿ. ಪ್ರಾ. ಶಾಲಾ ಕ್ರೀಡೋತ್ಸವ

Suddi Udaya

ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ

Suddi Udaya

ಚಾರ್ಮಾಡಿ: ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

Suddi Udaya
error: Content is protected !!