ಬಳಂಜ: ಧಾರ್ಮಿಕವಾಗಿ, ಸಾಮಾಜಿಕವಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಎಲ್ಯೋಟ್ಟು ಮನೆತನದ ರಾಜು ಪೂಜಾರಿ-ಶ್ರೀಮತಿ ಕಮಲ ಹಾಗೂ ಬಾಬು ಪೂಜಾರಿ-ಶ್ರೀಮತಿ ಪ್ರೇಮಾ ದಂಪತಿಗಳ 50 ನೇ ವರ್ಷದ ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಎ.21 ರಂದು ನಡೆಯಿತು.
ಎಲ್ಯೋಟ್ಟು ರಾಜು ಪೂಜಾರಿ- ಕಮಲ ಮತ್ತು ಬಾಬು ಪೂಜಾರಿ-ಪ್ರೇಮಾ ದಂಪತಿ 21/04/1975 ರಲ್ಲಿ ಮದುವೆಯಾಗಿ 50 ವರ್ಷದ ಸಾರ್ಥಕ್ಯ ಜೀವನವನ್ನು ಸಾಗಿಸಿದ ಮಾದರಿಯಾಗಿದ್ದಾರೆ. ಆ ಸಮಯದಲ್ಲಿ ಮದುವೆ ದಿಬ್ಬಣ ಲಾರಿಯಲ್ಲಿ ಬಂದಿರುವಂತದ್ದು, ವಾಹನದ ವ್ಯವಸ್ಥೆ ಇಲ್ಲದೆ ನಡೆದುಕೊಂಡೆ ಕುಟುಂಬಸ್ಥರು ಭಾಗವಹಿಸಿರುವುದು ಹಾಗೂ ಅಂದಿನ ಮದುವೆಯ ಖುಷಿಯ ಸಿಹಿಯನ್ನು ಸಮಾರಂಭದಲ್ಲಿ ಹಂಚಿಕೊಂಡರು.
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿಯವರು ಎಲ್ಯೋಟ್ಟು ಮನೆತನ ಹಾಗೂ ಕೂಡು ಕುಟುಂಬದ ಬಗ್ಗೆ ಸಭೆಗೆ ತಿಳಿಸಿದರು. ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸಾಮಾಜಿಕವಾಗಿ ಸಮಾಜದಲ್ಲಿ ಎಲ್ಯೋಟ್ಟು ಕುಟುಂಬದ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಎಲ್ಯೋಟ್ಟು ಕುಟುಂಬದ ಪರಿಚಯವನ್ನು ಮಾಡಿದರು.
ಈ ಸಂದರ್ಭದಲ್ಲಿ ವೈವಾಹಿಕ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಎಂ.ಸಿ ಸ್ಟ್ಯಾಂಡನ್ನು ಕುಟುಂಬಸ್ಥರು ಕೊಡುಗೆಯಾಗಿ ನೀಡಿದರು.
ಹರೀಶ್ ವೈ ಚಂದ್ರಮ, ಜಗದೀಶ್ ಪೂಜಾರಿ-ವಿಶಾಲ ಬಳ್ಳಿದಡ್ಡ. ಪ್ರಶಾಂತ್-ಅರ್ಚನಾ ಎಲ್ಯೋಟ್ಟು, ನೋಣಯ್ಯ ಪೂಜಾರಿ-ಶಶಿಕಲಾ, ಯುವರಾಜ್ ವೈ-ವಿಜಯ, ಭುವನೇಂದ್ರ ವೈ-ಜಯಂತಿ, ಸೇಸಪ್ಪ ವೈ-ಜಯಂತಿ, ಸಂಜೀವ ವೈ-ವಸಂತಿ, ಸೋಮನಾಥ ವೈ-ವಿಜಯ, ವೇದಾವತಿ ವೈ-ಲಕ್ಷ್ಮಣ ಪೂಜಾರಿ, ಸುಹಾಸಿನಿ ಬಾಬ ಶಂಕರ್ ಚಿಕ್ಕಮಗಳೂರು, ಹರಿಣಿ-ಕರುಣಾಕರ ಸುವರ್ಣ ಮರೋಡಿ, ಜಯಂತಿ, ಜಯಶೀಲಾ, ವಿನೋದ ಬಳ್ಳಿದಡ್ಡ, ರೂಪನಾಥ ವೈ.ಎಲ್, ಯತೀಶ್ ವೈ.ಎಲ್, ಹಾಗೂ ಎಲ್ಯೋಟ್ಟು ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ ವೈವಾಹಿಕ ಸುವರ್ಣ ಸಂಭ್ರದಲ್ಲಿ ಸಂಭ್ರಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಬಂಧು- ಬಳಗ ಹಾಗೂ ಊರವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಹಿತೈಷಿಗಳು ಆಗಮಿಸಿ ದಂಪತಿಗಳಿಗೆ ಶುಭಾಶಯ ಕೋರಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ದೀಕ್ಷಿತ್ ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು.