September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಈ ಬಾರಿಯ ಲೋಕಸಭಾ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧಾರ ಮಾಡುವ ನಿರ್ಣಾಯಕವಾದಂತಹ ಚುನಾವಣೆ: ಪ್ರತಾಪ್ ಸಿಂಹ ನಾಯಕ್

ಬೆಳ್ತಂಗಡಿ : ಈ ಬಾರಿಯ ಲೋಕಸಭಾ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧಾರ ಮಾಡುವ ನಿರ್ಣಾಯಕವಾದಂತಹ ಚುನಾವಣೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಇವರು ಏ.23ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರದಲ್ಲಿ ಸ್ಥಿರವಾದಂತಹ ಸರ್ಕಾರ, ಜೊತೆಗೆ ಗಟ್ಟಿಯಾದ ನಾಯಕತ್ವ ಇದ್ದಾಗ ದೇಶ ಯಾವ ರೀತಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು, ಗಟ್ಟಿಯಾದಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯ ಎನ್ನುವಂತಹದನ್ನು ಹತ್ತು ವರ್ಷದಲ್ಲಿ ಜಗತ್ತಿಗೆ ಹಾಗೂ ಭಾರತಕ್ಕೆ ತೋರಿಸಿಕೊಟ್ಟಿದೆ. ಈ ಬಾರಿ ಬಿಜೆಪಿ ತನ್ನ ಕೆಲಸದ ಮೇಲೆ, ಅಭಿವೃದ್ಧಿಯ ಆಧಾರದ ಮೇಲೆ ಕಳೆದ ಎಲ್ಲಾ ದಾಖಲೆಗಳನ್ನು ಮೀರಿ 400 ರ ಗಡಿಯನ್ನು ಗೆಲ್ಲುವ ನಿಶ್ಚಿಯ ಗುರಿಯೊಂದಿಗೆ ಹೆಜ್ಜೆ ಇಡುತ್ತಿದ್ದರೆ, ಕಾಂಗ್ರೆಸ್ 40 ರ ಗಡಿಯನ್ನು ದಾಟುವುದಕಕ್ಕೆ ಪ್ರಯತ್ನ ಪಡಬೇಕಾದಂತಹ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಹಾಗಾಗಿ ಕಾಂಗ್ರೆಸ್ ಕೇಂದ್ರದಲ್ಲಿ ಸ್ಥಿರ ಸರ್ಕಾರ ಕೊಡುತ್ತದೆ ಎನ್ನುವುದು ಮರೀಚಿಕೆ ಮಾತ್ರ.

ತಮಿಳುನಾಡು, ಕೇರಳದಲ್ಲಿ ಅಭೂತಪೂರ್ವವಾದ ಬೆಂಬಲ ಸಿಗುತ್ತಿದೆ. ದಕ್ಷಿಣ ಭಾರತದಲ್ಲಿ ಎಲ್ಲಾ ಭಾಗದಲ್ಲೂ ಬಿಜೆಪಿ ಗಟ್ಟಿಯಾಗುತ್ತಿದೆ. ಸ್ಥಿರ ಸರ್ಕಾರ ಮತ್ತು ಆರ್ಥಿಕ ಪ್ರಗತಿಗೂ ಸಂಬಂಧವಿದೆ. 10ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನದಲ್ಲಿದೆ. ದೇಶ ಪ್ರಗತಿಗೆ ಹೋಗುತ್ತಿದೆ ಎಂಬುವುದು ಜನರಿಗೆ ವಿಶ್ವಾಸ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುವುದು 11 ತಿಂಗಳಲ್ಲಿ ರಾಜ್ಯ ಸರ್ಕಾರವನ್ನು ನೋಡಿದಾಗ ಗೊತ್ತಾಗುತ್ತದೆ. ಬದುಕಿಗೆ ವಿಶ್ವಾಸ ಕೊಡಬಲ್ಲ ಕೇಂದ್ರದ 500ಕ್ಕೂ ಮಿಕ್ಕಿದ ಯೋಜನೆಗಳು ಜನ ಸಾಮಾನ್ಯರಲ್ಲಿ ವಿಶ್ವಾಸವನ್ನು ತುಂಬಿಸಿದೆ. ದೇಶ ಪ್ರಗತಿಗೆ ಸಾಗುತ್ತಿದೆ ಎಂಬುವುದು ಜನರಿಗೆ ನಂಬಿಕೆ ಇದೆ. ಆರ್ಥಿಕ ಪ್ರಗತಿಗೆ ಸ್ಥಿರ ಸರ್ಕಾರ ಅಗತ್ಯವಿದೆ, ಈ ಸ್ಥಿರ ಸರ್ಕಾರವನ್ನು ಕೊಡುವುದಕ್ಕೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.

ರಾಜೇಶ್ ಪೆರ್ಮುಡ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” — ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಸಿಯೋನ್ ಆಶ್ರಮಕ್ಕೆ ನೆರವು

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಂಜನಾ ಎಂ.ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಸಂಸ್ಥಾಪನಾ ದಿನಾಚರಣೆ ಮತ್ತು ನಿಪುಣ್ ಪರೀಕ್ಷೆಯ ಬಗ್ಗೆ ಕಾರ್ಯಾಗಾರ

Suddi Udaya

ಧರ್ಮಸ್ಥಳ ಶ್ರೀ ಕ್ಷೇತ್ರ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ

Suddi Udaya

ಆರ್‌ಸಿಬಿ ಸಂಭ್ರಮಾಚರಣೆ: ಇಳಂತಿಲ ಮೂಲದ ಯುವತಿ ಮೃತ್ಯು

Suddi Udaya
error: Content is protected !!